ರಾಯಲ್ ಚಾಲೆಂಜರ್ಸ್ ಬಾಲೆಂಬಿ ಚೆಂಬು ತಂಡದ ಸಮಾಜಮುಖಿ ನಡೆ : ಗೆದ್ದ ಬಹುಮಾನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅರ್ಪಣೆ
ಚೆಂಬು: ಗಣೇಶ್ ಚತುರ್ಥಿ ಪ್ರಯುಕ್ತ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ರಾಯಲ್ ಚಾಲೆಂಜರ್ಸ್ ಬಾಲೆಂಬಿ ಚೆಂಬು ತಂಡವು ವಿಜೇತರಾಗಿ ಹೊರಹೊಮ್ಮಿದೆ.ಪಂದ್ಯಾಟದಲ್ಲಿ ಗೆದ್ದ ನಗದು ಬಹುಮಾನವನ್ನು ವೈಯಕ್ತಿಕವಾಗಿ ಬಳಸಿಕೊಳ್ಳದೆ, ಚೆಂಬು ಶಾಲೆಯ 2026–27ನೇ ಸಾಲಿನ SSLC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವಾಗಿ ನೀಡಲು ತಂಡದ ಯುವಕರು ನಿರ್ಧರಿಸಿದ್ದಾರೆ.
ಕ್ರೀಡಾ ಪ್ರತಿಭೆಯೊಂದಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಾಮಾಜಿಕ ಕಾಳಜಿ ಮೆರೆದಿರುವ ತಂಡದ ಈ ನಿರ್ಧಾರವು ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಂಬಲ ನೀಡುವ ಈ ಸಮಾಜಮುಖಿ ಕಾರ್ಯವು ಇತರ ಯುವಕರಿಗೂ ಪ್ರೇರಣೆಯಾಗಲಿ ಎಂಬ ಮೆಚ್ಚುಗೆ ವ್ಯಕ್ತವಾಗಿದೆ.



Scroll To Top