ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ತಂಡದಿಂದ ಸಂಸದ ರಾಜಮೋಹನ್ ಉಣ್ಣಿತ್ತಾನ್ ಭೇಟಿ : ಕನ್ನಡಿಗರು, ಕನ್ನಡ ಶಾಲೆಗಳ ಸಮಸ್ಯೆಗಳ ಕುರಿತು ಮನವಿ
ಕಾಸರಗೋಡು : ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ಅಂಗವಾಗಿ ನಡೆಯುತ್ತಿರುವ ಕನ್ನಡ ಯಾತ್ರೆಯ ತಂಡವು ಶನಿವಾರ ಕಾಸರಗೋಡಿನಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರನ್ನು ಭೇಟಿ ಮಾಡಿ, ಜಿಲ್ಲೆಯ ಕನ್ನಡಿಗರು ಹಾಗೂ ಕನ್ನಡ ಶಾಲೆಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿತು. ಉನೈಸ್ ಪೆರಾಜೆ ಅವರ ನೇತೃತ್ವದಲ್ಲಿ ನಡೆದ ಈ ಭೇಟಿಯಲ್ಲಿ ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳ ಸಂರಕ್ಷಣೆ, ಕನ್ನಡಿಗರ ಹಕ್ಕುಗಳು ಹಾಗೂ ಕನ್ನಡ ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಂಸದರಿಗೆ ಮನವರಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಖಿಲೇಶ್ ನಗುಮುಗಂ, ಹರೀಶ್ ಗೋಶಾಡ, ಬೆಂಗಳೂರು ಕನ್ನಡ ಸಂಘದ ಕೃಷ್ಣಮೂರ್ತಿ, ದಾಸರತಿ, ಮಂಜುನಾಥ್, ಶಿಹಾಬ್ ಗಾಳಿಮುಖ, ರಹೀಮ್ ಬಂದಡ್ಕ, ಗುರುರಾಜ್ ಸೇರಿದಂತೆ ಕನ್ನಡ ಪರ ಹೋರಾಟದ ಪ್ರಮುಖರು ಹಾಗೂ ಅಭಿಯಾನ ತಂಡದ ಸದಸ್ಯರು ಉಪಸ್ಥಿತರಿದ್ದರು.



Scroll To Top