ಎಸ್ಕೆಎಸ್ಎಸ್ಎಫ್ ಸುಳ್ಯ ಕ್ಲಸ್ಟರ್ಗೆ ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ ಶಂಶುದ್ದೀನ್ ಎ.ಎಂ. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಫೈಸಲ್ ಅಯ್ಕೆ

ಸುಳ್ಯ: ಎಸ್ಕೆಎಸ್ಎಸ್ಎಫ್ ಸುಳ್ಯ ಕ್ಲಸ್ಟರ್ನ ಮಹಾಸಭೆ ಸೆ. 28ರಂದು ಸುಳ್ಯದ ಸುಪ್ರೀಂ ಹಾಲ್ನಲ್ಲಿ ನಡೆಯಿತು. ಸಭೆಯಲ್ಲಿ 2026–29ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮಹಾಸಭೆಯ ಲೆಕ್ಕಪತ್ರ ಇಕ್ಬಾಲ್ ಸುಣ್ಣಮೂಲೆ ಮಂಡಿಸಿದರು. ಚುನಾವಣಾಧಿಕಾರಿಯಾಗಿ ಅಬ್ದುಲ್ಲ ಫೈಝಿ ಪೈಂಬಚಾಲ್ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಜಮಾಲ್ ಬೆಳ್ಳಾರೆ ಭಾಗವಹಿಸಿದರು. ಪೇರಡ್ಕ ಮಸೀದಿಯ ಖತೀಬ್ ನಹೀಂ ಫೈಝಿ ಪ್ರಾಸ್ತಾವಿಕ ಭಾಷಣ ಮಾಡಿದರು.
ನೂತನ ಕಾರ್ಯಕಾರಿ ಸಮಿತಿ, 2026-29
ಅಧ್ಯಕ್ಷರು: ಶಂಶುದ್ದೀನ್ ಎ.ಎಂ. ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಫೈಸಲ್, ಕೋಶಾಧಿಕಾರಿ ಖಲೀಲ್,ಕಾರ್ಯಾಧ್ಯಕ್ಷ ಕಾರ್ಯದರ್ಶಿ: ಮುಈನ್ ಇ.ಕೆ. ಉಪಾಧ್ಯಕ್ಷರು: ಮುಹಮ್ಮದ್ ಇರ್ಷಾದ್ ಪಿ.ಎಂ., ಮುನೀರ್ ದಾರಿಮಿ, ಲುಕ್ಮಾನ್ ಹಕೀಂ ಬಿ.ಕೆ. ಜಂಟಿ ಕಾರ್ಯದರ್ಶಿಗಳು: ಅಬುಸಾಲಿ ಎಸ್.ಎ., ತಾಜುದ್ದೀನ್ ಎಸ್. ಅರಂತೋಡು, ಅಬ್ದುಲ್ ರವೂಫ್ ಎಸ್.ಎಂ. ಅಯ್ಕೆ ಯಾದರು.
ಸದಸ್ಯರಾಗಿ, ಮುಹಮ್ಮದ್ ಅನ್ಸಫ್, ಅಬ್ದುಲ್ ಕಾದರ್, ಇಕ್ಬಾಲ್ ಅಬ್ದುಲ್ ರಹಿಮಾನ್ ಎಸ್.ಎ., ಸಿ.ಎ. ಅಕ್ಬರ್ ಅಲಿ, ಡಾ. ತಾಜುದ್ದೀನ್ ಟರ್ಲಿ (ಗೌರವ ಸದಸ್ಯ), ಮುಹಮ್ಮದ್ ನವಾಝ್, ನಾಸಿರುದ್ದೀನ್, ಅಹ್ಮದ್ ನಈಮ್ ಫಾಝಿ ಅಲ್ ಮಹಬರಿ ಹಾಗೂ ಎಸ್. ಜುಬೈರ್. ರನ್ನು ಅಯ್ಕೆ ಮಾಡಲಾಯಿತು
ಇಕ್ಬಾಲ್ ಸ್ವಾಗತಿಸಿದರು. ಖಾದರ್ ವಂದಿಸಿದರು. ಸಭೆಯಲ್ಲಿ ಕ್ಲಸ್ಟರ್ನ ವಿವಿಧ ಘಟಕಗಳ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




Scroll To Top