ಇತರೆ

ಬಹ್ರೈನ್ ಬ್ರಿಟಿಷ್ ಅಂತರ್‌ಶಾಲಾ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಮಿಂಚಿದ ಸುಳ್ಯದ ಬಾಲಕಿ ಮರಿಯಂ ಅಶ್ರಫ್

ಮರಿಯಂ ಅಶ್ರಫ್ ಅವರು ಬಹ್ರೈನ್‌ನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿರುವ ಸುಳ್ಯ ಪೆರಾಜೆ ಮೂಲದ ಅಶ್ರಫ್ ಬಿಳಿಯಾರ್ ಹಾಗೂ ಶಿಫಾ ಮಿಶ್ರಿಯಾ ದಂಪತಿಯ ದ್ವಿತೀಯ ಪುತ್ರಿ

ಬಹ್ರೈನ್: ಬ್ರಿಟಿಷ್ ಇಂಟರ್-ಸ್ಕೂಲ್, ಬಹ್ರೈನ್ ಅಥ್ಲೀಟ್ಸ್ ಸ್ಪೋರ್ಟ್ಸ್ ವತಿಯಿಂದ ಆಯೋಜಿಸಲಾಗಿದ್ದ ಟೇಬಲ್-ಟೆನಿಸ್ ಸ್ಪರ್ಧೆಯಲ್ಲಿ ಬಹ್ರೈನ್‌ನ ಅಲ್ ನೂರ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿನಿ ಹಾಗೂ ಸುಳ್ಯ ಪೆರಾಜೆ ಮೂಲದ ಬಾಲಕಿ ಮರಿಯಂ ಅಶ್ರಫ್ ಗಮನಾರ್ಹ ಸಾಧನೆ ಮಾಡಿದ್ದಾರೆ.

ಅಕ್ಟೋಬರ್ 3ರಂದು ಅಲ್ ಹಿಕ್ಮಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಮರಿಯಂ ಅಶ್ರಫ್ ಒಟ್ಟು ಐದು ಪಂದ್ಯಗಳಲ್ಲಿ ಭಾಗವಹಿಸಿ, ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಅವರು ಮೂರನೇ ಸ್ಥಾನ ಪಡೆದುಕೊಂಡರು. ಇದರೊಂದಿಗೆ ಬಾಲಕಿಯರ ವಿಭಾಗದಲ್ಲಿ ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಮರಿಯಂ ಅಶ್ರಫ್ ಅವರು ‘ಓವರ್‌ಆಲ್ ಗರ್ಲ್ಸ್ ಕಪ್’ಗೂ ಅರ್ಹತೆ ಪಡೆದುಕೊಂಡರು. ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ ಹಾಗೂ ಉತ್ತಮ ಆಟದ ಮೂಲಕ ಗಮನ ಸೆಳೆದಿರುವ ಅವರ ಸಾಧನೆಗೆ ಬಹ್ರೈನ್‌ನಲ್ಲಿರುವ ಕನ್ನಡಿಗರು ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮರಿಯಂ ಅಶ್ರಫ್ ಅವರು ಬಹ್ರೈನ್‌ನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿರುವ ಸುಳ್ಯ ಪೆರಾಜೆ ಮೂಲದ ಅಶ್ರಫ್ ಬಿಳಿಯಾರ್ ಹಾಗೂ ಶಿಫಾ ಮಿಶ್ರಿಯಾ ದಂಪತಿಯ ದ್ವಿತೀಯ ಪುತ್ರಿ.