Featured, ಕ್ರೀಡೆ

ಸುಳ್ಯ: ‘ಫ್ರೆಂಡ್ಸ್ ಟ್ರೋಫಿ ಲೀಗ್–ಸೀಸನ್ 1’ — ವಿಜೇತರಿಗೆ ನೀಡುವ ಆಕರ್ಷಕ ಟ್ರೋಫಿಗಳ ಅನಾವರಣ

ಪಂದ್ಯಾವಳಿಗಾಗಿ ವಿಶೇಷವಾಗಿ ಚಿನ್ನದ ವರ್ಣದ ಆಕರ್ಷಕ ವಿನ್ಯಾಸದಲ್ಲಿ ಸಿದ್ಧಪಡಿಸಲಾದ ಟ್ರೋಫಿ…

ಸುಳ್ಯ: ಫ್ರೆಂಡ್ಸ್ ಸುಳ್ಯ ವತಿಯಿಂದ ಅಕ್ಟೋಬರ್ 18ರಂದು ಆಯೋಜಿಸಿರುವ ‘ಫ್ರೆಂಡ್ಸ್ ಟ್ರೋಫಿ ಲೀಗ್–ಸೀಸನ್ 1’ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ನೀಡಲಾಗುವ ಆಕರ್ಷಕ ಟ್ರೋಫಿಗಳನ್ನು ಇಂದು ಸಾರ್ವಜನಿಕವಾಗಿ ಅನಾವರಣಗೊಳಿಸಲಾಯಿತು.

ಪಂದ್ಯಾವಳಿಗಾಗಿ ವಿಶೇಷವಾಗಿ ಚಿನ್ನದ ವರ್ಣದ ಆಕರ್ಷಕ ವಿನ್ಯಾಸದಲ್ಲಿ ಸಿದ್ಧಪಡಿಸಲಾದ ಟ್ರೋಫಿಗಳನ್ನು ಉದ್ಯಮಿ ಹಾರೀಸ್ ಬಾರ್ಪಣೆ ಅನಾವರಣಗೊಳಿಸಿ, ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲ ತಂಡಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಫೈಝಲ್ ಕಟ್ಟೆಕ್ಕಾರ್, ಆಶಿಕ್, ಅನ್ಶಾದ್, ಅಶ್ರಫ್, ರಿಝ್ವಾನ್, ಅಬು ಸಾಲಿ ಹಾಗೂ ರವೂಫ್ ಉಪಸ್ಥಿತರಿದ್ದರು.

ನಾಳೆ ನಡೆಯಲಿರುವ ಈ ಫುಟ್ಬಾಲ್ ಪಂದ್ಯಾವಳಿಯಲ್ಲಿ ಔರಾ ಫುಟ್ಬಾಲ್ ಕ್ಲಬ್, ಎಫ್3 ಕ್ಲಬ್ ಸುಳ್ಯ, ಟೀಮ್ ರೋಜಾ, ಎಫ್‌ಸಿ ಧಾಧಾ, ಸ್ಪೋರ್ಟಿಂಗ್ ಎಫ್‌ಸಿ ಅರಂಬೂರು, ಬಂತ್ರಾಲಿಯನ್ ಎಫ್‌ಸಿ, ಸಾಗರ್ ಎಫ್‌ಸಿ ಜಟ್ಟಿಪಳ್ಳ ಹಾಗೂ ಕ್ಲಾಸಿಕ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಮುಚಿಳ ಸೇರಿದಂತೆ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಮೂಡಿಸಿರುವ ‘ಫ್ರೆಂಡ್ಸ್ ಟ್ರೋಫಿ ಲೀಗ್–ಸೀಸನ್ 1’ ಪಂದ್ಯಾವಳಿಯು ರೋಚಕ ಫುಟ್ಬಾಲ್ ಕದನಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

Related Posts