Featured, ಇತರೆ

ನೆಡುಂಬಾಶೇರಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಯಾಸ್ ಮನೆಗೆ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಭೇಟಿ; ಕುಟುಂಬಕ್ಕೆ ಸಾಂತ್ವನ

ಸುಳ್ಯ, ಅ.26: ಕೇರಳದ ಎರ್ನಾಕುಲಂ ಜಿಲ್ಲೆಯ ನೆಡುಂಬಾಶೇರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುಳ್ಯ ತಾಲೂಕಿನ ಕನಕಮಜಲು ಸುಣ್ಣಮೂಲೆ ನಿವಾಸಿ ಇಯಾಸ್ ಅವರ ಮನೆಗೆ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಅವರು ಸೋಮವಾರ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಮಂಗಳೂರು ಜಿಲ್ಲಾಧ್ಯಕ್ಷ ಅನ್ವರ್ ಸಾದತ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಕಲಾಂ ಸುಳ್ಯ, ಜಿಲ್ಲಾ ಸಮಿತಿ ಸದಸ್ಯ ಸಿದ್ದೀಕ್ ಅರಕ್ಕಾಡಿ, ಸುಳ್ಯ ತಾಲೂಕು ಅಧ್ಯಕ್ಷ ಮಿರಾಜ್ ಸುಳ್ಯ ಹಾಗೂ ಸದಸ್ಯರಾದ ಅಬ್ದುಲ್ಲ ಅಡ್ಕಾರ್, ಕಲಂದರ್ ಅರಂಬೂರು, ಷರೀಫ್ ನಿಂತಿಕ್ಕಲ್ ಮತ್ತು ಕಬೀರ್ ಅರಂಬೂರು ಉಪಸ್ಥಿತರಿದ್ದರು