ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ರಿ) ಪಾಲಿಬೆಟ್ಟ ರೇಂಜ್ ಸಮಿತಿ ಎರಡು ವರ್ಷಕೊಮ್ಮೆ ಆಯೋಜಿಸುವ ಪ್ರತಿಭೋತ್ಸವ ನವಂಬರ್ 15ರಂದು ಪಾಲಿಬೆಟ್ಟ ಮುಹಿಮ್ಮಾತುದ್ದೀನ್ ಮದ್ರಸಾ ವಠಾರದಲ್ಲಿ ಜರಗಿತು. ಮಖಾಂ ಝಿಯಾರತ್ ಗೆ ಮಹಲ್ಲ್ ಖತೀಬ್ ರಾಫಿ ಹಿಮಮಿ ಕಾಮಿಲ್ ಸಖಾಫಿ ನೇತೃತ್ವ ನೀಡಿದರು. ಮಹಲ್ಲ್ ಅಧ್ಯಕ್ಷರಾದ ಇಸ್ಮಾಯೀಲ್ ಹಾಜಿ ಧ್ವಜಾರೋಹಣಗೈದರು.
ರೇಂಜ್ ವ್ಯಾಪ್ತಿಯ 16 ಮದ್ರಸಾಗಳ 450 ವಿದ್ಯಾರ್ಥಿಗಳು 4 ವಿಭಾಗಗಳಾಗಿ 5 ವೇದಿಕೆಗಳಲ್ಲಿ 89 ಸ್ಪರ್ಧೆಗಳಲ್ಲಿ ಭಾಗವಹಿಸಿದರು. 512 ಅಂಕಗಳೊಂದಿಗೆ ಪಾಲಿಬೆಟ್ಟ ಮುಹಿಮ್ಮಾತುದ್ದೀನ್ ಮದ್ರಸಾ ಚಾಂಪಿಯನ್ಸ್ ಪಟ್ಟ ಅಲಂಕರಿಸಿದರು. 312 ಅಂಕಗಳೊಂದಿಗೆ ಹುಂಡಿ ಹಿದಾಯತುಲ್ ಇಸ್ಲಾಂ ಮದ್ರಸಾ ರನ್ನರ್ಸ್ ಹಾಗೂ 271 ಅಂಕಗಳೊಂದಿಗೆ ದಾರುನ್ನಜಾತ್ ಸುನ್ನಿ ಮದ್ರಸಾ ತೃತೀಯ ಸ್ಥಾನವನ್ನು ಪಡೆದರು.

ಸಮಾರೋಪ ಸಮಾರಂಭವನ್ನು ರೇಂಜ್ ಅಧ್ಯಕ್ಷ ಅಬೂಬಕರ್ ಮದನಿ ಉದ್ಘಾಟಿಸಿದರು. ರೇಂಜ್ ಪ್ರತಿಭೋತ್ಸವ ಸಮಿತಿ ಚೇರ್ಮಾನ್ ಝೈನುದ್ದೀನ್ ಮುಸ್ಲಿಯಾರ್ ಚಾಂಪಿಯನ್ಸ್ ಟೀಂ ಘೋಷಿಸಿದರು. ರೇಂಜ್ ಸಮಿತಿ ಪ್ರ. ಕಾರ್ಯದರ್ಶಿ ಸಬಾಹ್ ಸಖಾಫಿ ಸಂದೇಶ ಭಾಷಣಗೈದರು. ರೇಂಜ್ ಫಿನಾನ್ಸ್ ಕಾರ್ಯದರ್ಶಿ ಹನೀಫ್ ಹಿಮಮಿ, ಪ್ರತಿಭೋತ್ಸವ ಸಮಿತಿ ಫಿನಾನ್ಸ್ ಕಂಟ್ರೋಲರ್ ರಿಯಾಝ್ ಫಾಳಿಲಿ, ಪಾಲಿಬೆಟ್ಟ ಮಹಲ್ಲ್ ಸಮಿತಿ ಉಪಾಧ್ಯಕ್ಷರಾದ ಝೈನುದ್ದೀನ್ ಎಂ, ಪ್ರ. ಕಾರ್ಯದರ್ಶಿ ಶಮೀರ್ ಮುನ್ನ, ಖಜಾಂಜಿ ಮುಸ್ತಫ ಟಿ.ಕೆ ಬಹುಮಾನ ವಿತರಿಸಿದರು. 16 ಮಹಲ್ಲ್ ಗಳ ಆಡಳಿತ ಸಮಿತಿ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಪ್ರತಿಭೋತ್ಸವ ಸಮಿತಿ ಜನರಲ್ ಕನ್ವೀನರ್ ಝುಬೈರ್ ಸಅದಿ ಸ್ವಾಗತಿಸಿ ಕನ್ವೀನರ್ ರಝಾಖ್ ಸಅದಿ ವಂದಿಸಿದರು.