ಮಂಗಳೂರು: ಜಾಮಿಯಾ ಹಾಶಿಮೀಯ್ಯಾ ಅಲ್ ಇಸ್ಲಾಮೀಯ್ಯಾ ಸಂಸ್ಥೆಯ ಸಿಲ್ವರ್ ಜ್ಯುಬಿಲಿ ಸಮ್ಮೇಳನ ಇದೇ ಬರುವ ಫೆಬ್ರವರಿ 22 ರಿಂದ 25 ರ ವರೆಗೆ ನಡೆಯಲಿದೆ 270 ಯುವ ಹಾಶಿಮಿ ವಿದ್ವಾಂಸರಿಗೆ ಬಿರುದು ಸನದುದಾನ ನಡೆಯಲಿದೆ ಇದರ ಭಾಗವಾಗಿ ಪ್ರಚಾರ ಸಂಗಮ ನಾಳೆ ಜನವರಿ ಹನ್ನೆರಡರಂದು ಸುನ್ನೀ ಸೆಂಟರ್ ಗಾಂಧಿನಗರ ಸುಳ್ಯದಲ್ಲಿ ನಡೆಯಲಿದೆ.
ಹಾಶಿಮೀಯ್ಯಾ ಪ್ರಧಾನ ಕಾರ್ಯದರ್ಶಿ ಶೈಖುನಾ ಬಾದ್ಶಾ ಸಖಾಫಿ ಉಸ್ತಾದ್ ಹಾಗೂ ಧಾರ್ಮಿಕ, ಸಾಮಾಜಿಕ ಮುಖಂಡ ಭಾಗವಹಿಸಲಿದ್ದಾರೆ. ಜೊತೆಗೆ ಹಾಶಿಮೀಯ ದೌರತುಲ್ ಹದೀಸ್ ಒಂದು ವರ್ಷದ ಪ್ರವೇಶ ಪರೀಕ್ಷೆ ಸದರಿ ದಿನದಂದು ಮಧ್ಯಾಹ್ನ 2 ರಿಂದ ಸಂಜೆ 6ರ ತನಕ ನಡೆಯಲಿದೆ ಎಂದು ಹಾಶಿಮೀಯ್ಯಾ ಮುದರ್ರಿಸ್ ಜಾಬಿರ್ ಹಾಶಿಮಿ ಅಲ್ ಖಾದಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




m

