Featured, ಅಂಕಣ, ಸ್ಥಳೀಯ

ಸುಳ್ಯದಲ್ಲಿ ಆಧಾರ್ ಸೇವೆ ವ್ಯತ್ಯಾಸ: SDPI ಯ ಮನವಿಗೆ ತಹಶೀಲ್ದಾರರಿಂದ ಸ್ಪಂದನೆ

ಸುಳ್ಯ, ಜನವರಿ 31:ಕಳೆದ ಕೆಲವು ತಿಂಗಳುಗಳಿಂದ ಸುಳ್ಯದಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಆಧಾರ್ ಸೇವಾ ಸೌಲಭ್ಯವು ಸ್ಥಗಿತಗೊಂಡಿದ್ದು, ಅಗತ್ಯ ಕಾರ್ಯಗಳಿಗೆ ಆಧಾರ್ ಕಡ್ಡಾಯವಾಗಿರುವ ಕಾರಣದಿಂದ ಆಧಾರ್ ಸೇವಾ ಸೌಲಭ್ಯವಿಲ್ಲದೆ ಜನರು ಕಷ್ಟಪಡುತ್ತಿದ್ದಾರೆ.

ಸುಳ್ಯ ತಾಲೂಕಿನಲ್ಲಿ 40 ಗ್ರಾಮಗಳಿದ್ದು, ಬೆಳ್ಳಾರೆಯ ಅಂಚೆ ಕಚೇರಿಯಲ್ಲಿ ಏಕೈಕ ಆಧಾರ್ ಸೇವಾ ಕೇಂದ್ರವಿದೆ.

ಆದುದರಿಂದ, ತ್ವರಿತವಾಗಿ ಸ್ಪಂದಿಸಿ ತಾಲೂಕು ಕೇಂದ್ರವಾದ ಸುಳ್ಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಆಧಾರ್ ಸೇವಾ ಕೇಂದ್ರವನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಸುಳ್ಯ ತಹಶೀಲ್ದಾರರಿಗೆ ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಮನವಿ ನೀಡಲಾಯಿತು.

ಮನವಿ ಸ್ವೀಕರಿಸಿದ ತಹಶೀಲ್ದಾರರು ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ಮಾಡುವ ಭರವಸೆಯನ್ನು ನೀಡಿದ್ದಾರೆ.

ನಿಯೋಗದಲ್ಲಿ ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಕೊಡಿಯಮ್ಮೆ, ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಡ್ವಕೇಟ್ ಅಬ್ದುಲ್ ರಶೀದ್ ಗೂನಡ್ಕ, ಸುಳ್ಯ ಬ್ಲಾಕ್ ಸಮಿತಿ ಕಾರ್ಯದರ್ಶಿ ಸುಹೈಲ್ ಸುಳ್ಯ ಉಪಸ್ಥಿತರಿದ್ದರು.

m

Related Posts