ಪಂಜದ ಪೆಟ್ರೋಲ್ ಬಂಕ್ಗಳು ಊಟಕ್ಕಿಲ್ಲದ ಉಪ್ಪಿನಕಾಯಿ!ಬಂಕ್ಗಳಿವೆ ಆದರೆ ಹಲವಾರು ದಿನಗಳಿಂದ ಇಂಧನ ಪೂರೈಕೆ ಇಲ್ಲ.!
ಸುಳ್ಯ ತಾಲೂಕಿನಲ್ಲಿ ಬೆಳೆಯುತ್ತಿರುವ ಪೇಟೆ ಪಟ್ಟಣಗಳಲ್ಲಿ ಪಂಜವೂ ಒಂದಾಗಿದೆ ಒಂದು ಕಡೆ ಕರ್ನಾಟಕದಲ್ಲಿಯೇ ಪ್ರಸಿದ್ದಿ ಪಡೆದ ಪಂಚಲಿಂಗೇಶ್ವರ ದೇವಸ್ಥಾನ ಇದೆ. ಇಲ್ಲಿ ಫೆಬ್ರವರಿ 5 ಮತ್ತು6 ದಿನಾಂಕಗಳಲ್ಲಿ (ಜಾತ್ರೋತ್ಸವ) ದರ್ಶನ ಬಲಿ ಮತ್ತು ರಥೋತ್ಸವ ನಡೆಯುತ್ತಿದ್ದು ಇಲ್ಲಿಗೆ ಬರುವ ಭಕ್ತಾದಿಗಳು ಅಲ್ಲದೆ ಇನ್ನಿತರ ದಿನನಿತ್ಯದ ಕಾರ್ಯಗಳಿಗೆ ಬರುವ ವಾಹನದವರು ಪಂಜದಲ್ಲಿ ಪೆಟ್ರೋಲ್, ಡೀಸೆಲ್ ತುಂಬಿಸುವ ಎಂದು ನಂಬಿ ಬರಬೇಡಿ.
ಪಂಜ ಪೇಟೆಯ ಅಸುಪಾಸಿನಲ್ಲಿ ಇತೀಚೆಗೆ 2 ಪೆಟ್ರೋಲ್ ಬಂಕ್ ಗಳು ಕಾರ್ಯಚರಿಸುತ್ತಿತ್ತು.
ಅದರಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಬಂಕ್ ಕೆಲವು ಸಮಯಗಳಿಂದ ಬಂದ್ ಅಗಿದ್ದು, ಇನ್ನೊಂದು ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಕಾರ್ಯಚರಿಸುತ್ತಿತ್ತು.
ಆದರೆ ಇಲ್ಲಿ ಕಳೆದ 16 ದಿನಗಳಿಂದ ಪೆಟ್ರೋಲ್ ಡೀಸೆಲ್ ತುಂಬಿಸಲು ಬರುವ ಗ್ರಾಹಕರಿಗೆ ದೂರದಿಂದಲೇ ಕೈ ಸನ್ನೆಯ ಮೂಲಕ ಬರಬೇಡಿ ಬರಬೇಡಿ, ಇಲ್ಲ ಇಲ್ಲ ಅನ್ನುತ್ತಿದ್ದಾರೆ, ಇಲ್ಲಿಯ ಸಿಬ್ಬಂದಿ.
ಕನಿಷ್ಠ ಇಂಧನ ಇಲ್ಲ ಅಂತ ಒಂದು ಬೋರ್ಡ್ ಹಾಕುವ ಪ್ರಯತ್ನವನ್ನಾದರೂ ಮಾಡಬೇಕಿತ್ತು. ಅಥವಾ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ಒಂದು ಹಗ್ಗವನ್ನು ಕಟ್ಟಬೇಕಿತ್ತು ಅದೂ ಇಲ್ಲ. ಈ ಪೆಟ್ರೋಲ್ ಬಂಕ್ ಅನ್ನು ನಂಬಿಕೊಂಡು ಬರುವ ವಾಹನ ಸವಾರರು ಹಿಡಿ ಶಾಪ ಹಾಕಿ ಮರಳಿ ಹೋಗುತ್ತಿದ್ದಾರೆ.
ಇಂಧನ ತುಂಬಿಸಲು ಅಲ್ಲಿಂದ 7 ಕಿಲೋಮೀಟರ್ ದೂರದ ಬಂಕ್ ಗೆ ಹೋಗುತಿದ್ದಾರೆ.
ಈ ಎರಡು ಬಂಕ್ಗಳ ಮಾಲಕರು ಹಾಗೂ ಇಂಡಿಯನ್ ಆಯಿಲ್ ಹಾಗೂ ಭಾರತ್ ಪೆಟ್ರೋಲಿಯಂ ಕಂಪನಿಯವರು ಗ್ರಾಹಕರ ಸಹನೆಯನ್ನು ಪರೀಕ್ಷೆ ಮಾಡದೆ ಕೂಡಲೇ ಇಂಧನ ವಿತರಿಸಲು ಮುಂದಾಗಬೇಕು.
ಹಮೀದ್ ಮರಕ್ಕಡ
ಕಾರ್ಯದರ್ಶಿಗಳು SDPI
ಬೆಳ್ಳಾರೆ ಬ್ಲಾಕ್