ಸುಳ್ಯ
ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ, ಹಾಗೂ ಹಿದಾಯ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಉಚಿತ ಕನ್ನಡಕ ವಿತರಣೆ ಅಭಿಯಾನ ಗುರುವಾರ (06/02/2025) ಸಂಜೆ ಯಿಂದ ಶುಕ್ರವಾರ (07/02/2025) ರ ಸಂಜೆ ತನಕ ತಾಲೂಕಿನ ವಿವಿಧ ಭಾಗಗಳಲ್ಲಿ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಎಮ್ ವೈ ಎಫ್ ನ ಸದಸ್ಯರು ಇವಾರ್ತೆಗೆ ಮಾಹಿತಿ ನೀಡಿದ್ದಾರೆ.

ಕಳೆದ ಜನವರಿ 19 ರಂದು ನಡೆದ ಆರೋಗ್ಯ ಮೇಳದಲ್ಲಿ ನೇತ್ರ ತಜ್ಞರು ಶಿಫಾರಸು ಮಾಡಿದ ಸುಳ್ಯ ತಾಲೂಕಿನ ವಿವಿಧ ಭಾಗದ ಸುಮಾರು 127 ಜನರಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಲಿದೆ ಗುರುವಾರ (06/02/2025) ಸಂಜೆ (4.30) ಸುಳ್ಯದ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಳ್ಯ ನಗರ ಭಾಗದ ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಯಾಗಲಿದೆ.

ಮುಂದುವರಿದು ಗುರುವಾರ ಸಂಜೆ ಕಳೆದ ರಾತ್ರಿ(7 PM) ಗಂಟೆಗೆ ಪೆರಾಜೆ ಯಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಜರುಗಲಿದೆ ಮರುದಿನ ಶುಕ್ರವಾರ (07/02/2025) ರಂದು ಕಲ್ಲುಗುಂಡಿ, ಸಂಪಾಜೆ, ಪಡ್ಪಿನಂಗಡಿ, ಅರಂಬೂರು, ಕೊಯನಾಡು

ಜಿರ್ಮಖಿ,ಪೈಚಾರು,ಎಲಿಮಲೆ,ಹಳೆಗೇಟು,ಜಟ್ಟಿಪಳ್ಳ ಈಗೆ ವಿವಿಧ ಕಡೆ ಉಚಿತ ಕನ್ನಡಕ (ಜನವರಿ 19 ನಡೆದ ಆರೋಗ್ಯ ಮೇಳದಲ್ಲಿ ನೇತ್ರ ತಜ್ಞರು ಶಿಫಾರಸು ಮಾಡಿದ ಅರ್ಹ ರಿಗೆ) ವಿತರಣೆ ನಡೆಯಲಿದೆ ಎಂದು ಎಮ್ ವೈ ಎಫ್ ನ ಸದಸ್ಯರು ಇವಾರ್ತೆಗೆ ತಿಳಿಸಿದ್ದಾರೆ.






m

