Featured, ಇತರೆ

ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರ ಮಾಸಿಕ ಸಹಾಯಧನ ₹2,200ಕ್ಕೆ ಏರಿಕೆ

ಹಿಂದಿನ ಸರ್ಕಾರದ ಕಡಿತದ ನಿರ್ಧಾರ ರದ್ದು; ಮುಂದಿನ ತಿಂಗಳಿನಿಂದಲೇ ಪರಿಷ್ಕೃತ ಮೊತ್ತ ಪಾವತಿ

ಶುಕ್ರವಾರ ಕಾಸರಗೋಡಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಅವರ ಸಂಕಷ್ಟಗಳನ್ನು ಆಲಿಸಿದ್ದೇನೆ. ಅವರ ನೋವು ಮತ್ತು ಬದುಕಿನ ಹೋರಾಟ ನನ್ನನ್ನು ತೀವ್ರವಾಗಿ ಕಾಡಿದೆ ಎಂದು ಸತೀಶನ್ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಗೋಡಂಬಿ ತೋಟಗಳಲ್ಲಿ ಹಲವು ವರ್ಷಗಳ ಕಾಲ ಹೆಲಿಕಾಪ್ಟರ್‌ಗಳ ಮೂಲಕ ಎಂಡೋಸಲ್ಫಾನ್ ಕೀಟನಾಶಕವನ್ನು ವೈಮಾನಿಕವಾಗಿ ಸಿಂಪಡಿಸಲಾಗಿತ್ತು. ಇದರ ಪರಿಣಾಮವಾಗಿ ಸಾವಿರಾರು ಮಂದಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದು, ಅನೇಕ ಕುಟುಂಬಗಳು ಇಂದಿಗೂ ಸಂಕಷ್ಟದ ಜೀವನ ನಡೆಸುತ್ತಿವೆ.

ಸಂತ್ರಸ್ತರಿಗೆ ಸೂಕ್ತ ಪರಿಹಾರ, ವೈದ್ಯಕೀಯ ನೆರವು ಹಾಗೂ ಆರ್ಥಿಕ ಭದ್ರತೆ ಒದಗಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಈ ನಡುವೆ ಮಾಸಿಕ ಸಹಾಯಧನ ಹೆಚ್ಚಿಸುವ ನಿರ್ಧಾರ ಸಂತ್ರಸ್ತ ಕುಟುಂಬಗಳಿಗೆ ಕೊಂಚ ನೆಮ್ಮದಿ ನೀಡುವ ನಿರೀಕ್ಷೆಯಿದೆ.

Related Posts