ವಿಟ್ಲ :ಮಾದಕಟ್ಟೆ ಅನುಧಾನಿತ ಕಿರಿಯ ಪ್ರಾಥಮಿಕ ಶಾಲೆಗೆ ಫೆ 10 ರಂದು ಬಂಟ್ವಾಳ ತಹಶೀಲ್ದಾರ್ ರವರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಧಿಡೀರ್ ಭೇಟಿ ನೀಡಿದರು.
ಶಾಲೆಗೆ ಭೇಟಿ ನೀಡಿದ ತಹಶೀಲ್ದಾರ್ ರವರು ಅಲ್ಪ ಸಮಯ ವಿಧ್ಯಾರ್ಥಿಗಳೊಂದಿಗೆ ಬೆರೆತು ಪಠ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದರು.

ವಿದ್ಯಾರ್ಥಿಗಳು ಶಾಲೆಗೆ ಬರಲು ಬಳಸಿಕ್ಕೊಳ್ಳುವ ಸಮಯ ಹಾಗೂ ದೂರ ಮುಂತಾದ ವಿಚಾರದ ಕುರಿತು ಮಾಹಿತಿ ಪಡೆದು ವಿದ್ಯಾರ್ಥಿಗಳಿಗೆ ರಕ್ಷಣೆ ಮತ್ತು ಜಾಗೃತಿ ಕುರಿತು ಅರಿವು ನೀಡಿದರು.
ಬಳಿಕ ಶಾಲೆ ವತಿಯಿಂದ ಮುಖ್ಯೋಪಾಧ್ಯಾಯ ಹರೀಶ್ ಕುಮಾರ್ ತಹಶೀಲ್ದಾರ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಶಾಲೆಗೆ ಸಂಬಂಧಿಸಿದ ಸ್ಥಳ ಹಾಗೂ ವಿವಿಧ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡರು ಎನ್ನ ಲಾಗಿದೆ.

ಈ ಸಂಧರ್ಭದಲ್ಲಿ ಕಂದಾಯ ನಿರೀಕ್ಷಕಾಧಿಕಾರಿ, ಹಾಗೂ ಇನ್ನಿತರ ಅಧಿಕಾರಿಗಳು ಶಾಲೆಯ ಶಿಕ್ಷಕ ವೃಂಧ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





m

