Featured, ಅಂಕಣ, ಸ್ಥಳೀಯ

ಬೆಳ್ತಂಗಡಿಯ ಪಟ್ಟಣ ಪಂಚಾಯತ್ ಸದಸ್ಯರು ಪಕ್ಷಭೇದ ಮರೆತು ದಲಿತ ವಿರೋಧಿ ನಿಲುವಿಗೆ ಕೈ ಜೋಡಿಸಿದ್ದು ಸಂವಿಧಾನ ವಿರೋಧಿ ; SDPI ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಆಕ್ರೋಶ

ಬೆಳ್ತಂಗಡಿ (ಫೆ-11): ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ/ಪಂಗಡ ಸಮುದಾಯದ ಕುಡಿಯುವ ನೀರಿನ ಶುಲ್ಕ ಪಾವತಿಸುವ ಬಗ್ಗೆ ಮತ್ತು ಕೆರಳೆಕೋಡಿ ಸ್ಮಶಾನದ ಶಿಥಿಲಾವಸ್ಥೆಯ ಬಗ್ಗೆ ಸಮಾಲೋಚನೆಗಾಗಿ ಸೋಮವಾರ ಪಟ್ಟಣ ಪಂಚಾಯತ್ ಕರೆದಿದ್ದ ಅಧಿಕೃತ ಸಭೆಗೆ ಅಧ್ಯಕ್ಷರನ್ನೊಳಗೊಂಡ ಇಡೀ ಸದಸ್ಯರು ಗೈರಾಗಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಖಂಡಿಸಿದ್ದಾರೆ.

     ದಲಿತ ಕಾಲೋನಿಗೆ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ, ರೆಂಕೆದಗುತ್ತು – ಕೆಲ್ಲಗುತ್ತು ಪ್ರದೇಶದ ಕೆರಳೆಕೋಡಿ ಎಂಬಲ್ಲಿನ ಸಾರ್ವಜನಿಕ ರುದ್ರ ಭೂಮಿ (ಸ್ಮಶಾನ) ಕೂಡಾ ಪಾಳು ಬಿದ್ದಿದೆ ಸ್ಮಶಾನ ದುರಸ್ತಿ ಮತ್ತು ನಿರ್ವಹಣೆ ಬಗ್ಗೆ ಸಮಾಲೋಚನೆ ಸಭೆಗೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು, ಕೆಲ್ಲಗುತ್ತು, ಸುದೆಮುಗೇರು, ಕಲ್ಕಣಿ ಪರಿಶಿಷ್ಟ ಜಾತಿ ಕಾಲೋನಿಗಳ ಮುಖಂಡರು ಸಭೆಗೆ ಹಾಜರಾಗಿದ್ದು, ಚುನಾವಣೆ ಸಂದರ್ಭದಲ್ಲಿ ಎಲ್ಲಾ ಜಾತಿಗಳ ಮತವನ್ನು ಪಡೆದ ಜನಪ್ರತಿನಿಧಿಗಳು ಪರಿಶಿಷ್ಟ ಜಾತಿ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ, ದಲಿತ ವಿರೋಧಿ ನಿಲುವುಗಳನ್ನು ಕೈ ಗೊಳ್ಳುವಾಗ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಜೊತೆಯಾಗಿ ಸಹಕರಿಸಿ ಕಾರ್ಯರೂಪಕ್ಕೆ ತರುತ್ತಿರುವುದು ಕಾಣುತ್ತಿದೆ, ಇದೊಂದು ಸಂವಿಧಾನ ವಿರೋಧಿ ನಡೆ ಎಂದು ಅಕ್ಬರ್ ರವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ

     ಬೆಳ್ತಂಗಡಿ ಪಟ್ಟಣ ಪಂಚಾಯತ್ ನಲ್ಲಿ ಸ್ವಾತಂತ್ರ್ಯದ ನಂತರದಲ್ಲಿ ಇಲ್ಲಿಯವರೆಗೆ ಬೇರೆ ಬೇರೆ ಅವಧಿಯಲ್ಲಿ ಕಾಂಗ್ರೆಸ್, ಜೆ.ಡಿ.ಎಸ್ ಮತ್ತು ಭಾಜಪ ಆಡಳಿತ ನಡೆಸಿದೆ ಆದರೆ ದಲಿತ ಕಾಲೊನಿಗಳಿಗೆ ಇನ್ನು ಸರಿಯಾಗಿ ಮೂಲಭೂತ ಸೌಕರ್ಯಗಳನ್ನೇ ಒದಗಿಸಿಲ್ಲ.

         ಒಟ್ಟು ಹನ್ನೊಂದು ಮಂದಿ ಸದಸ್ಯರಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್ ನಲ್ಲಿ ಆಡಳಿತಾರೂಢ ಭಾಜಪ ಏಳು ಸದಸ್ಯರನ್ನು ವಿಪಕ್ಷವಾದ ಕಾಂಗ್ರೆಸ್ ನಾಲ್ಕು ಸದಸ್ಯರನ್ನು ಜೊತೆಗೆ ಮೂವರು ನಾಮ ನಿರ್ದೇಶಿತ ಸದಸ್ಯರನ್ನು ಹೊಂದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಪಕ್ಷ ಭೇದ ಮರೆತು ಗೈರಾಗಿರುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಗೆ ಮಾಡಿದ ಅನ್ಯಾಯವಾಗಿದೆ. ಇಂದು ನಾವೆಲ್ಲರೂ ಒಂದು ಎಂದು ಬೀಗುವ ಬಿಜೆಪಿಗರು ಮತ್ತು ದಲಿತರನ್ನು ನಾವೆಂದಿಗೂ ಕೈ ಬಿಡುವುದಿಲ್ಲ ಎಂದು ಹೇಳುವ ಕಾಂಗ್ರೆಸ್ಸಿಗರ ಈ ಒಳ ಒಪ್ಪಂದದಿಂದಾಗಿ ಪರಿಶಿಷ್ಟ ಜಾತಿ ಸಮುದಾಯದ ಸಭೆಗೆ ಗೈರಾಗಿರುವುದು ಖಂಡನೀಯ.

       ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರು ಕರೆದ ಪರಿಶಿಷ್ಟರ ಸಭೆಗೆ ಅಧ್ಯಕ್ಷ ಜಯಾನಂದ ಗೌಡ ಅವರನ್ನೊಳಗೊಂಡು 10 ಮಂದಿ ಸದಸ್ಯರು ಗೈರು ಹಾಜರಾಗಲು ಬಲವಾದ ಕಾರಣವೇನು.? ಪರಿಶಿಷ್ಟರ ಕುಂದು ಕೊರತೆಗಳೆಂದರೆ ಅಲರ್ಜಿಯೇ.? ಜವಾಬ್ದಾರಿಗಳಿಂದ ಜಾರಿಕೊಳ್ಳುವ ಬುದ್ದಿವಂತಿಕೆಯೇ? ಅಥವಾ ಸ್ಮಶಾನದ ಅವ್ಯವಸ್ಥೆ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವೆಂದು ತಪ್ಪಿಸಿಕೊಂಡರೇ? ಪರಿಶಿಷ್ಟರ ಕುಂದು ಕೊರತೆಗಳೆಂದರೆ ತಪ್ಪಿಸಿಕೊಳ್ಳುವಷ್ಟು ನಿರ್ಲಕ್ಷ್ಯವೇ?

        ಕನಿಷ್ಠ ಪಕ್ಷ ದಲಿತರ ಅಹವಾಲನ್ನು ಕೇಳಲು ಕೂಡಾ ನಿರ್ಲಕ್ಷ್ಯ ತೋರುವ ನೀಚತನಕ್ಕೆ ಎರಡು ರಾಜಕೀಯ ಪಕ್ಷಗಳ ಸದಸ್ಯರು ತಲುಪಿದ್ದಾರೆಂದರೆ ಇವರ ಮನಸ್ಥಿತಿ ಅದೆಷ್ಟು ದಲಿತ ವಿರೋಧಿಯಾಗಿರಬಹುದು ಎಂದು ಜನರಾಡುತ್ತಿದ್ದಾರೆ. ಆಡಳಿತಾರೂಢ ಪಕ್ಷ ಮತ್ತು ವಿಪಕ್ಷಗಳೇ ದಲಿತ ವಿರೋಧಿ ನೀತಿಯನ್ನು ಅನುಸರಿಸಿದರೆ ಅವರು ತಮ್ಮ ನೋವನ್ನು ಹೇಳುವುದಾದರೂ ಯಾರ ಬಳಿ ಎನ್ನುವುದು ನಾಗರೀಕ ಸಮಾಜದ ಪ್ರಶ್ನೆಯಾಗಿದೆ.

     ಪಟ್ಟಣ ಪಂಚಾಯತ್ ಸದಸ್ಯರು ಬೆಳ್ತಂಗಡಿಯಲ್ಲಿರುವ ದಲಿತ ಸಮುದಾಯಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕ್ಷೇತ್ರ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿಯವರು ತಿಳಿಸಿದ್ದಾರೆ.

m

Related Posts