ಅಂಗನವಾಡಿಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿ ದಿಢೀರನೆ ಕುಸಿದು ಬಿದ್ದು ಮೃತ್ಯು;!
ಕೊಪ್ಪಳ: ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದ ಅಂಗನವಾಡಿಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿ ದಿಢೀರನೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಬಾಲಕಿ ಅಲಿಯಾ ಮಹ್ಮದ್ ರಿಯಾಜ್ ಎಂದು ಗುರುತಿಸಲಾಗಿದೆ.
ಸೋಮವಾರ ಮುಂಜಾನೆ ಎಂದಿನಂತೆ ಬಾಲಕಿ ಅಂಗನವಾಡಿಗೆ ಹೋಗಿದ್ದಳು. ಉಪಹಾರ ಸೇವಿಸಿದ ನಂತರ ಚಟುವಟಿಕೆಯಿಂದ ಆಟವಾಡುತ್ತಿದ್ದಳು. ಆದರೆ, ಮಧ್ಯಾಹ್ನ ಆಟವಾಡುತ್ತಿದ್ದಾಗ ದಿಢೀರನೆ ಕುಸಿದು ಬಿದ್ದಳು. ಅಂಗನವಾಡಿ ಸಹಾಯಕಿ ಈ ಸನ್ನಿವೇಶವನ್ನು ಗಮನಿಸಿ, ತಕ್ಷಣ ಪೋಷಕರಿಗೆ ಮಾಹಿತಿ ನೀಡಿದರು. ಬಾಲಕಿಯನ್ನು ಸಮೀಪದ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಬಾಲಕಿ ಮೃತಪಟ್ಟಿದ್ದಳು.
ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಬಾಲಕಿಯ ದೇಹವನ್ನು ಪರಿಶೀಲಿಸಿದರು. ಗಾಯದ ಗುರುತುಗಳು ಅಥವಾ ಏನಾದರೂ ನುಂಗಿದ್ದಾಳೆಯೇ ಎಂದು ಪರಿಶೀಲಿಸಲು ಎಕ್ಸ್-ರೇ ಮಾಡಲಾಯಿತು. ಆದರೆ, ದೇಹದೊಳಗೆ ಯಾವುದೇ ವಸ್ತು ಇರಲಿಲ್ಲ ಎಂದು ತಿಳಿದುಬಂದಿದೆ. ವೈದ್ಯರು ಬಾಲಕಿಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಸಾವಿಗೆ ಕಾರಣ ಎಂದು ಪೋಷಕರಿಗೆ ತಿಳಿಸಿದ್ದಾರೆ. ಇಂತಹ ಸನ್ನಿವೇಶಗಳು ಕೆಲವರಲ್ಲಿ ದಿಢೀರನೆ ಉಂಟಾಗಬಹುದು ಎಂದು ವೈದ್ಯರು ವಿವರಿಸಿದ್ದಾರೆ.





m

