Featured, ಅಂತರಾಷ್ಟ್ರೀಯ, ಇತರೆ, ಸ್ಥಳೀಯ

ಎರಡನೆ ತರಗತಿ ವಿದ್ಯಾರ್ಥಿನಿ ಸುಳ್ಯದ ಇಸ್ರಾ ಆಯಿಷಾ ಬರೆದ ಕಥಾ ಸಂಕಲನವನ್ನು ಪ್ರಕಾಶನ ಮಾಡಿದ UAE ಯ ಪ್ರತಿಷ್ಠಿತ ಯುನೈಟೆಡ್ ಅರಬ್ ಎಮರೇಟ್ಸ್ ಎಡಿಷನ್ ನ BriBooks

ತನ್ನ ಚೊಚ್ಚಲ ಕಥಾ ಸಂಕಲನ ಪ್ರಕಟದೊಂದಿಗೆ ಅತ್ಯಂತ ಕಿರಿಯ ಕಥೆ ಬರಹಗಾರರಲ್ಲಿ ಓರ್ವರಾಗಿ ಗುರುತಿಸಿಕೊಂಡ ಸುಳ್ಯದ ಇಸ್ರಾ ಆಯಿಷಾ

ದುಬೈ : ಇಸ್ರಾ ಆಯಿಷಾ ಬಶೀರ್ ಬರೆದ ಚೊಚ್ಚಲ ಆಂಗ್ಲ ಕಥಾ ಸಂಕಲನ “Tales of Wonder and Mystery” ಯುನೈಟೆಡ್ ಅರಬ್ ಎಮರೇಟ್ಸ್ ಎಡಿಷನ್ ನ BriBooks ಪ್ರಕಾಶನಗೊಳಿಸಿದೆ. ಇಸ್ರಾ ಶಾರ್ಜಾದಲ್ಲಿರುವ ಜೇಮ್ಸ್ ಮಿಲೇನಿಯಂ ಸ್ಕೂಲಿನ ಎರಡನೇ ತರಗತಿ ವಿದ್ಯಾರ್ಥಿನಿ. ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಮಹಮ್ಮದ್ ಬಶೀರ್ ಅರಂಬೂರು ಮತ್ತು ಹಸೀನಾ ದಂಪತಿಗಳ ಪುತ್ರಿ. ಹವ್ಯಾಸಿ ಸಣ್ಣ ಕಥೆ, ಕವನ ಮತ್ತು ಲೇಖನ ಬರಹಗಾರ್ತಿಯಾಗಿರುವ ಇಸ್ರಾ ತನ್ನ ಚೊಚ್ಚಲ ಕಥಾ ಸಂಕಲನ ಪ್ರಕಟದೊಂದಿಗೆ ಅತ್ಯಂತ ಕಿರಿಯ ಕಥೆ ಬರಹಗಾರರಲ್ಲಿ ಓರ್ವರಾಗಿ ಗುರುತಿಸಿಕೊಂಡಿದ್ದಾಳೆ.

ಏನಿದು ಯುನೈಟೆಡ್ ಅರಬ್ ಎಮರೇಟ್ಸ್ ಎಡಿಷನ್ ನ BriBooks ??

BriBooks ವಿಶ್ವದ ಪ್ರಮುಖ ಮಕ್ಕಳ ಸೃಜನಶೀಲ ಬರವಣಿಗೆಗೆ  ವೇದಿಕೆಯಾಗಿದ್ದು 6 ವರ್ಷದಿಂದ 16 ವರ್ಷದ ಮಕ್ಕಳಿಗೆ ತಮ್ಮ ಕಥೆಗಳನ್ನು ಬರೆಯಲು, ಪ್ರಕಟಿಸಲು ಮತ್ತು ಪ್ರದರ್ಶಿಸಲು ಅವಕಾಶ ನೀಡುತ್ತದೆ.ಮಕ್ಕಳ ಸಾಹಿತ್ಯ ಕೌಶಲ್ಯಗಳನ್ನು ಹೆಚ್ಚಿಸುವುದು ಮತ್ತು ಅವರ ಪುಸ್ತಕಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವುದು, BriBooks ನ ಉದ್ದೇಶವಾಗಿರುತ್ತದೆ Gulf News, SchoolsCompared.com, ಮತ್ತು WhichSchoolAdvisor.com ಸಹಭಾಗಿಗಳಾಗಿ ಕಾರ್ಯನಿರ್ವಹಿಸುತ್ತದೆ,ಮಕ್ಕಳ ಸೃಜನಶೀಲತೆಗೆ ಅವಕಾಶ ನೀಡುವುದರ ಜೊತೆಗೆ, ಅವರ ಪುಸ್ತಕಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತದೆ.

m