Featured, ಅಂಕಣ, ಸ್ಥಳೀಯ

SJM ಪಾಲಿಬೆಟ್ಟ ರೇಂಜ್ : ಝುಮ್ರಾ ರೇಂಜ್ ಮೀಟ್ ಅಪ್

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ರಿ) ಪಾಲಿಬೆಟ್ಟ ರೇಂಜ್ ಸಮಿತಿ ವತಿಯಿಂದ ಝುಮ್ರಾ ರೇಂಜ್ ಮೀಟ್ ಅಪ್ ಹಾಗೂ ರೇಂಜ್ ವ್ಯಾಪ್ತಿಯ 44 ಮುಅಲ್ಲಿಮರಿಗೆ ರಮಳಾನ್ ಕಿಟ್ ವಿತರಣಾ ಕಾರ್ಯಕ್ರಮ ಫೆಬ್ರವರಿ 22ರಂದು ನೆಲ್ಲಿಹುದಿಕೇರಿ ದಾರುನ್ನಜಾತ್ ನಲ್ಲಿ ಜರಗಿತು.

ರೇಂಜ್ ಸಮಿತಿ ಉಪಾಧ್ಯಕ್ಷ ಶಂಸುದ್ದೀನ್ ಸಅದಿ ಅಲ್ ಅಫ್ಳಲಿ ರವರ ಅಧ್ಯಕ್ಷತೆಯಲ್ಲಿ ಎಸ್.ಜೆ.ಎಂ ಕೊಡಗು ಜಿಲ್ಲಾ ಕಾರ್ಯದರ್ಶಿ ಝೈನುದ್ದೀನ್ ಮುಸ್ಲಿಯಾರ್ ಉದ್ಘಾಟಿಸಿದರು. ಪಾಲಿಬೆಟ್ಟ ರೇಂಜ್ ಫಿನಾನ್ಸ್ ಕಾರ್ಯದರ್ಶಿ ಅಬೂಬಕರ್ ಮದನಿ ಪ್ರಸ್ತಾವಿಕ ಮಾತುಗಳನ್ನಾಡಿದರು.

ಮುಅಲ್ಲಿಮರ ಕಿಟ್ ಗಳಿಗೆ ಸಹಕಾರ ನೀಡಿದ ಸರ್ವರ ಒಳಿತಿಗಾಗಿ ಮತ್ತು ಅವರ ಕುಟುಂಬಗಳಿಂದ ಮರಣ ಹೊಂದಿದವರಿಗೆ ಯಾಸೀನ್ ಪಾರಾಯಣ, ದುಆ ಮಜ್ಲಿಸ್ ಸಂಘಟಿಸಲಾಯಿತು. ಎಸ್.ಜೆ.ಎಂ ಪಾಲಿಬೆಟ್ಟ ರೇಂಜ್ ಸಮಿತಿ ಅಧ್ಯಕ್ಷ ನೌಷಾದ್ ಝುಹ್ರಿ ದುಆ ಮಜ್ಲಿಸ್ ಗೆ ನೇತೃತ್ವ ನೀಡಿದರು. ರೇಂಜ್ ಪ್ರ. ಕಾರ್ಯದರ್ಶಿ ಸಬಾಹ್ ಸಖಾಫಿ ಸ್ವಾಗತಿಸಿ ಕಾರ್ಯದರ್ಶಿ ಝುಬೈರ್ ಸಅದಿ ವಂದಿಸಿದರು.

m

Related Posts