Featured, ಸ್ಥಳೀಯ

ಗಟ್ಟಿ ಚರ್ಮದ ಮೆಸ್ಕಾಂ ಅಧಿಕಾರಿಗಳು; ಊಟಕಿಲ್ಲದ ಉಪ್ಪಿನಕಾಯಿಯಂತಾಗಿರುವ ಜನಪ್ರತಿನಿಧಿಗಳು ಕಡೆ ಗಣನೆಗೆ ಒಳಪಟ್ಟ ರಾಜ್ಯದ ಏಕೈಕ ತಾಲ್ಲೂಕು ಸುಳ್ಯ!!! ಹಿಂದಿನ ಮತ್ತು ಇಂದಿನ ಶಾಸಕರಿಗೆ ನಮೋ ನಮಃ!

ಗಟ್ಟಿ ಚರ್ಮದ ಮೆಸ್ಕಾಂ ಅಧಿಕಾರಿಗಳು; ಊಟಕಿಲ್ಲದ ಉಪ್ಪಿನಕಾಯಿಯಂತಾಗಿರುವ ಜನಪ್ರತಿನಿಧಿಗಳು

ಕಡೆ ಗಣನೆಗೆ ಒಳಪಟ್ಟ ರಾಜ್ಯದ ಏಕೈಕ ತಾಲ್ಲೂಕು ಸುಳ್ಯ!!! ಹಿಂದಿನ ಮತ್ತು ಇಂದಿನ ಶಾಸಕರಿಗೆ ನಮೋ ನಮಃ!

ಅಲ್ಲಾ ಸ್ವಾಮಿ! ಅದೆಂತ ಕಥೆ ನಮ್ಮ ಸುಳ್ಯ ತಾಲ್ಲೂಕಿನದ್ದು. ಯಾಕಿಷ್ಟು ಕಡೆಗಣನೆ, ಕರೆಂಟ್ ಇಲ್ಲ! ಕರೆಂಟ್ ಇಲ್ಲ! ಎಂದು ಪ್ರಕಟಣೆ ಹಾಕಲು ಗೊತ್ತಿದೆ. ಏನು ಕಾಳಜಿನಪ್ಪ ಇವರದ್ದು ಅನ್ಬೇಕು. ಆದ್ರೆ ಕಿತ್ತು ತೆಗ್ದಿರೋ ಕರೆಂಟ್ ಮತ್ತೆಕೊಡುವ ಕಾಳಜಿ ಇವ್ರಿಗಿಲ್ಲ!.

ದುರಾದೃಷ್ಟ ಅನ್ನಲೇಬೇಕು ಇವರ ಚರ್ಮ ಗಟ್ಟಿನೋ ಮನಸು ಗಟ್ಟಿನೋ ಗೊತ್ತಿಲ್ಲ! ಸುಳ್ಯವನ್ನಂತು ಕತ್ತಲೆಯಲ್ಲಿ ಹಾಕೋದೆ ರೂಡಿಯಾಗಿಬಿಟ್ಟಿದೆ.

ಶಾಸಕರು ಬದಲಾದರು ಕತ್ತಲೆಯ ಶಾಸನ ಮಾತ್ರ ಬದಲಾಗಲಿಲ್ಲ! ಇವ್ರ ಕೈಯಲ್ಲಿ ಅಧಿಕಾರ ಇದ್ರು ಇಲ್ಲ ಅಂದ್ರು ಅಷ್ಟೇ ತೇಟ್ ಊಟಕಿಲ್ಲದ ಉಪ್ಪಿನ ಕಾಯಿಯಂತಾಗಿದೆ ನಮ್ಮೂರ ಶಾಸಕರು.

ಮುತ್ತಜನ ಕಾಲದಿಂದ ಬಂದಿರುವ ಸಮಸ್ಯೆ “ಕತ್ತಲ ಬಾಗ್ಯ” ಸುಳ್ಯವನ್ನು ಇನ್ನು ಕೈ ಬಿಟ್ಟಿಲ್ಲ! ಸಮಸ್ಯೆಗಳನ್ನು ಬಗೆಹರಿಸಲು ಚಾಲೆಂಜ್ ಆಗಿಯಾದರು ತೆಗೆದುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಜನಪ್ರತಿನಿಧಿ ಮೈಗಳ್ಳರಂತೆ ನಡೆದುಕೊಂಡರೆ ಹೇಗೆ ತಾನೆ ಅಭಿವೃದ್ಧಿ ಸಾಧ್ಯ?

ಊರಿಗೆ ಊರೇ ಕತ್ತಲಾದರು ಇಲ್ಲಿನ ಜನಪ್ರತಿನಿಧಿಗೆ ಇದು ಒಂದು ಸಮಸ್ಯೆಯೇ ಅಲ್ಲ! ಅಧಿಕಾರಿಗಳ ಬಗ್ಗೆ ಹೇಳಿದರೆ, ವಿಧ್ಯಾರ್ಥಿಗಳಿಗೆ ಪರೀಕ್ಷೆ ದಿನಗಳು ಮುಂದೆ ನೋಡುತ್ತಿರುವಾಗ ಮೆಸ್ಕಾಂ ಗಟ್ಟಿ ಚರ್ಮದ ಅಧಿಕಾರಿಗಳ ಬಂಡ ದೈರ್ಯದ ಪವರ್ ಕಟ್ ಮೆಚ್ಚಲೇ ಬೇಕು.

ಇದಕ್ಕೆ ಶಾಶ್ವತಾ ಪರಿಹಾರ ಕಂಡುಕೊಳ್ಳುವ ಬಗ್ಗೆ ಯಾವುದೇ ಆಲೋಚನೆಗಳು ಕೂಡ ಇವರ ಮುಂದಿಲ್ಲ! ಮೈಗಳ್ಳರಿಂದ ಇನ್ನೇನು ನಿರೀಕ್ಷಿ ಇಡೋದು.

ಇವರಲ್ಲಿ ಏನೇ ಕೇಳಿದರೂ ತಾಂತ್ರಿಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ‌. ಎಂಬ ಉತ್ತರಗಳನ್ನಷ್ಟೇ ನಿರೀಕ್ಷಿಸಬಹುದು. ಪವರ್ ಕಟ್ ಬಗ್ಗೆ ಚರ್ಚೆ, ಸಾಮಾಜಿಕ ಪುಟಗಳಲ್ಲಿನ ಇಂದಿನ ಚರ್ಚೆ ಕರೆಂಟ್ ಬಂದಾಗ ಮುಕ್ತಾಯವಾಗುತ್ತದೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೊನೆಯ ಪಕ್ಷ ಅಳಿಲು ಸೇವೆಯಂತಾದರು ಪ್ರಯತ್ನ ಮಾಡಲಿ ಎಂಬುದು ನಮ್ಮ ಆಶಯ!

m