Featured, ಅಂಕಣ, ಸ್ಥಳೀಯ

ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಕೌನ್ಸಿಲ್ :

ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಿ ಇಬ್ರಾಹಿಂ ಸ‌ಅದಿ ಮಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಸಯೀದ್ ಪುತ್ತೂರು ಹಾಗೂ ನೂತನ ಕೋಶಾಧಿಕಾರಿ ಹಬೀಬ್ ಶೇರಾ ಆಯ್ಕೆ

ಮಾಣಿ : ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಇದರ ಸರ್ಕಲ್ ಪುನರ್ರಚನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ದಿನಾಂಕ 17.02.2025 ಸೋಮವಾರದಂದು ಮಗರಿಬ್ ನಮಾಝ್ ಬಳಿಕ ತಾಜುಲ್ ಫುಖಹಾಅ್ ಸುನ್ನಿ ಸೆಂಟರ್ ಪರ್ಲೋಟ್ಟು ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಮಾಣಿ ಸರ್ಕಲ್ ಉಪಾಧ್ಯಕ್ಷರಾದ ಮುಹಮ್ಮದ್ ಹಬೀಬ್ ಶೇರಾರವರು ವಹಿಸಿದರು. ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡಮಿ ಕುದುಂಬ್ಲಾಡಿ ಇದರ ಸಾರಥಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಅಲ್ ಫುರ್ಖಾನಿರವರು ದುಆಃ ನೆರವೇರಿಸಿದರು. ಅಬ್ದುಲ್ ಅಝೀಝ್ ಸಖಾಫಿ ಸೂರ್ಯರವರು ಸಭೆಯನ್ನು ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಅಧ್ಯಕ್ಷರಾದ ಕೆ. ಬಿ. ಕಾಸಿಂ ಹಾಜಿ ಪರ್ಲೋಟ್ಟು ರವರು ಪಾಸ್ತಾವಿಕ ಮಾತನ್ನಾಡಿದರು. ಸರ್ಕಲ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು 2023-25ನೇ ಸಾಲಿನ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ವರದಿ ಹಾಗೂ ಲೆಕ್ಕಪತ್ರವನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ಸಮಿತಿಯನ್ನು ವಿಸರ್ಜಿಸಲಾಯಿತು.

ಸಭೆಯ ಕೇಂದ್ರ ಬಿಂದು ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್‌ ನಿಂದ ಆಗಮಿಸಿದ ಮುಹಮ್ಮದ್ ಬಯಂಬಾಡಿ ಹಾಗೂ ಇಸ್ಮಾಯಿಲ್ ಹಾಜಿ ಹಸನ್ ನಗರರವರ ನೇತೃತ್ವದಲ್ಲಿ 2025-27 ಸಾಲಿಗೆ 21 ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಬ್ರಾಹಿಂ ಸ‌ಅದಿ ಮಾಣಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಸಯೀದ್ ಪುತ್ತೂರುರವರು ಸತತ ಎರಡನೇ ಬಾರಿಗೆ ಆಯ್ಕೆಗೊಂಡರು. ನೂತನ ಕೋಶಾಧಿಕಾರಿಯಾಗಿ ಮುಹಮ್ಮದ್ ಹಬೀಬ್ ಶೇರಾ, ಉಪಾಧ್ಯಕ್ಷರಾಗಿ ಕೆ ಎಚ್ ದಾವೂದ್ ಕಲ್ಲಡ್ಕ, ದ‌ಅ್ವಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಸಖಾಫಿ ಸೂರ್ಯ, ಮೀಡಿಯಾ ಕಾರ್ಯದರ್ಶಿಯಾಗಿ ಝಕರಿಯಾ ಮುಸ್ಲಿಯಾರ್ ಕಲ್ಲಡ್ಕ, ಇಸಾಬಾ ಕಾರ್ಯದರ್ಶಿಯಾಗಿ ಅಬ್ದುಲ್ ಜಬ್ಬಾರ್ ಪಾಟ್ರಕೋಡಿ, ಸಹಾಯ್ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಬಿಬಿಡಬ್ಲ್ಯು ಮಿತ್ತೂರು, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಕೆ ಎಚ್ ಇಸ್ಮಾಯಿಲ್ ಹಾಜಿ ಬುಡೋಳಿ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ನೆಲ್ಲಿ ಆಯ್ಕೆಗೊಂಡರು. ಸದ್ಯರಾಗಿ ಯೂಸುಫ್ ಹಾಜಿ ಸೂರಿಕುಮೇರ್, ಕೆ. ಬಿ. ಕಾಸಿಂ ಹಾಜಿ ಪರ್ಲೋಟ್ಟು, ಕೆ. ಬಿ. ಇಸ್ಮಾಯಿಲ್ ಪರ್ಲೋಟ್ಟು, ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರ್, ಇಬ್ರಾಹಿಂ ಮದನಿ ಬುಡೋಳಿ, ಪಿ. ಎಚ್. ಅಬ್ದುಲ್ ಲತೀಫ್ ಕಲ್ಲಡ್ಕ, ನಝೀರ್ ಪಾಟ್ರಕೋಡಿ, ಇಸಾಕ್ ಬ್ಲಾಕ್ ಡೈಮಂಡ್ ಮಿತ್ತೂರು, ಅಬ್ದುಲ್ ಕಾಸಿಂ ಪಾಟ್ರಕೋಡಿ, ಇಬ್ರಾಹಿಂ ನೇರ್ಲಾಜೆ ಹಾಗೂ ಅಬ್ದುಲ್ ಹಮೀದ್ ಸೂರ್ಯ ಆಯ್ಕೆಯಾದರು. ಝೋನ್ ಕೌನ್ಸಿಲರುಗಳಾಗಿ ಇಬ್ರಾಹಿಂ ಸ‌ಅದಿ ಮಾಣಿ, ಯೂಸುಫ್ ಸಯೀದ್ ಪುತ್ತೂರು, ಮುಹಮ್ಮದ್ ಹಬೀಬ್ ಶೇರಾ, ಕೆ. ಬಿ. ಕಾಸಿಂ ಹಾಜಿ ಪರ್ಲೋಟ್ಟು, ಕೆ. ಎಚ್. ಇಸ್ಮಾಯಿಲ್ ಹಾಜಿ ಬುಡೋಳಿ, ಇಸಾಕ್ ಬ್ಲಾಕ್ ಡೈಮಂಡ್ ಮಿತ್ತೂರು, ಯೂಸುಫ್ ಹಾಜಿ ಸೂರಿಕುಮೇರ್, ಅಬ್ದುಲ್ ಹಮೀದ್ ಸೂರ್ಯ, ನಝೀರ್ ಪಾಟ್ರಕೋಡಿ ಹಾಗೂ ಹಾಜಿ ಅಬ್ದುಲ್‌ ರಝಾಕ್ ಫಲಾಹ್ ಕಲ್ಲಡ್ಕ ಆಯ್ಕೆಗೊಂಡರು.

ಸಭೆಯಲ್ಲಿ ಮಾಣಿ ಸರ್ಕಲ್ ವ್ಯಾಪ್ತಿಯ ಏಳು ಯುನಿಟುಗಳ ಸರ್ಕಲ್ ಕೌನ್ಸಿಲರುಗಳು ಭಾಗವಹಿಸಿದ್ದರು. ಸರ್ಕಲ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು ಮೊದಲಿಗೆ ಸ್ವಾಗತ, ಕೊನೆಯಲ್ಲಿ ಧನ್ಯವಾದಗೈದರು.

ವರದಿ : ಝಕರಿಯಾ ಮುಸ್ಲಿಯಾರ್ ಕಲ್ಲಡ್ಕ(ಮೀಡಿಯಾ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್)

m

Related Posts