ಬಾಗಲಕೋಟೆ: ಸಮವಸ್ತ್ರದಲ್ಲೇ ಕಾರ್ಯ ನಿರತ ಪೊಲೀಸರು ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಕಾಲಿಗೆ ನಮಸ್ಕಾರ ಮಾಡಿ, ಸಲ್ಯುಟ್ ಹೊಡೆದು ಹಣ ಪಡೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದು ರಾಜ್ಯದ ಹೊರಗೂ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಟ್ರೋಲ್ ಕೂಡ ಆಗಿತ್ತು, ಪೊಲೀಸರು ಸ್ವಾಮೀಜಿಗೆ ನಮಸ್ಕಾರ ಮಾಡಲಿ, ಆದರೆ ಕಾರ್ಯ ನಿರತರಾಗಿ ಸಮವಸ್ತ್ರದಲ್ಲಿ ನಮಸ್ಕಾರ ಮಾಡುವುದಲ್ಲದೇ ಹಣ ಕೂಡ ಪಡೆದಿದ್ದು ಬಾರಿ ಟೀಕೆಗೆ ಕಾರಣವಾಯಿತು.
ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ-ಆರೋಪಿಯ ಬಂಧನ
ಸದ್ಯ ಅವರ ಮೇಲೆ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದ್ದು ಆರು ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಆರು ಪೊಲೀಸರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.
ಸುಳ್ಯದಲ್ಲಿ “ಗಾಂಜಾ” “MDMA” ವೈರಲ್ ಬರಹ;!!!!
ಬಾದಾಮಿಯಿಂದ ವಿವಿಧ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಎಎಸ್ಐ ಡಿಜೆ ಶಿವಪುರ, ಎಎಸ್ಐ ಜಿಬಿ ದಳವಾಯಿ, ನಾಗರಾಜ ಅಂಕೋಲೆ, ಜಿಬಿ ಅಂಗಡಿ, ರಮೇಶ್ ಈಳಗೇರ, ರಮೇಶ್ ಹುಲ್ಲೂರು ವರ್ಗಾವಣೆಗೊಂಡಿದ್ದಾರೆ.
ವೈದಿಕ ಸೂಲಿಬೆಲೆ,ಮುತಾಲಿಕ್ ಗೆ ಸಮಾಜದಲ್ಲಿ ಹೆಣ್ಣು ನಿರಾಕರಣೆಯೇ ಅವರ ಅಬ್ಬೇಪಾರಿಕೆ ಸಮಸ್ಯೆಗೆ ಕಾರಣ: ಕೆ.ಅಶ್ರಫ್





m

