Featured, ಪ್ರವಾಸೋದ್ಯಮ, ರಾಜಕೀಯ, ರಾಷ್ಟ್ರೀಯ

ಮಹಾ ಕುಂಭಮೇಳದಲ್ಲಿ 30 ಕೋಟಿ ರೂ. ಗಳಿಸಿದ ದೋಣಿ ವಿಹಾರಿಗೆ 12.8 ಕೋಟಿ ರೂ. ತೆರಿಗೆ ಪಾವತಿಸಲು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್!!!

ಮಹಾ ಕುಂಭಮೇಳದಲ್ಲಿ 30 ಕೋಟಿ ರೂ. ಗಳಿಸಿದ ದೋಣಿ ವಿಹಾರಿಗೆ 12.8 ಕೋಟಿ ರೂ. ತೆರಿಗೆ ಪಾವತಿಸಲು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್

ಉತ್ತರ ಪ್ರದೇಶ: ಪ್ರಯಾಗ್‌ರಾಜ್‌ ನಲ್ಲಿ ನಡೆದ ವಿಶ್ವವಿಖ್ಯಾತ ಮಹಾ ಕುಂಭಮೇಳದಲ್ಲಿ ಸುಮಾರು 30 ಕೋಟಿ ರೂಪಾಯಿ ಗಳಿಸಿದ ದೋಣಿ ವಿಹಾರಗಾರನ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿಸುವಂತೆ ನೋಟಿಸ್ ಕಳುಹಿಸಿದ್ದು ಬಾರಿ ಚರ್ಚೆಗೆ ಗ್ರಾಸವಾಗಿದೆ. ಬಿಂದು ಮೆಹ್ರಾ ತ್ರಿವೇಣಿ ಸಂಗಮದ ಪಕ್ಕದಲ್ಲಿರುವ ಅರೈಲ್ ಗ್ರಾಮದವರು.

ಸೇವಾನಿರತ ಪೋಲಿಸರಿಂದ ಸ್ವಾಮಿಜಿ ಪಾದಕ್ಕೆ ನಮಿಸಿ ಹಣ ಸ್ವೀಕರಿಸಿದ ವೈರಲ್ ವೀಡಿಯೋ; 6 ಪೋಲಿಸ್ ಎತ್ತಂಗಡಿ

ಮಹಾ ಕುಂಭಮೇಳ ಉತ್ಸವವು ಜನವರಿ 13 ರಂದು ಪ್ರಾರಂಭವಾದಾಗಿ 45 ದಿನಗಳ ಕಾಲ ನಡೆಯಿತು. ದೇಶ ಮತ್ತು ವಿದೇಶಗಳಿಂದ 60 ಕೋಟಿಗೂ ಹೆಚ್ಚು ಭಕ್ತರು ಇದರಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತದೆ.

ಪಿಂಡು ಮೆಹ್ರಾ ಕುಟುಂಬವು ಜನವರಿ 23 ರಿಂದ ಫೆಬ್ರವರಿ 26 ರವರೆಗೆ ತಮ್ಮದೇ ಆದ 130 ದೋಣಿಗಳಲ್ಲಿ ಮಹಾ ಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುವ ಮೂಲಕ ದಿನಕ್ಕೆ ಸರಾಸರಿ 23 ಲಕ್ಷ ರೂ. ಲಾಭ ಗಳಿಸಿದ್ದಾರೆ ಹಾಗೂ ಈ ಮೂಲಕ ಕುಟುಂಬವು 45 ದಿನಗಳಲ್ಲಿ 30 ಕೋಟಿ ರೂ.ಗಳನ್ನು ಗಳಿಸಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಸುಳ್ಯದಲ್ಲಿ “ಗಾಂಜಾ” “MDMA” ವೈರಲ್ ಬರಹ;!!!!

ಪಿಂಡು ಕುಟುಂಬವು ಅಪರಾಧ ಹಿನ್ನೆಲೆಯನ್ನು ಹೊಂದಿರುವವರು ಎಂಬ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದು, ಅವರು 30 ಕೋಟಿ ರೂಪಾಯಿ ಆದಾಯವನ್ನು ಹೇಗೆ ಗಳಿಸಿದರು ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.

ಕಣ್ಣೂರು: ಮೀನು ಕಚ್ಚಿದ್ದರಿಂದ ಅಪರೂಪದ ಬ್ಯಾಕ್ಟೀರಿಯಾ ಸೋಂಕಿಗೆ ಗುರಿಯಾಗಿ ಯುವಕನ ಬಲಗೈ ಕತ್ತರಿಸುವಂತಾಯಿತು!

ಈ ಹಿನ್ನಲೆಯಲ್ಲಿ, ಆದಾಯ ತೆರಿಗೆ ಇಲಾಖೆಯು ಬಿಂದು ಮೆಹ್ರಾ ಅವರಿಗೆ ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 4 ಮತ್ತು 68 ರ ಅಡಿಯಲ್ಲಿ ನೋಟಿಸ್ ಕಳುಹಿಸಿದೆ ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹೊರಬಿದ್ದಿದೆ.

45 ದಿನಗಳಲ್ಲಿ 30 ಕೋಟಿ ರೂ.ಗಳ ಆದಾಯ ಗಳಿಸಲು 12.8 ಕೋಟಿ ರೂ.ಗಳ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಮೂಲಗಳು ವರದಿ ಮಾಡಿಕೊಂಡಿದೆ. ಕಷ್ಟಪಟ್ಟು ದುಡಿದು ಪ್ರತಿದಿನ 500-1,000 ರೂ. ಗಳಿಸುತ್ತಿದ್ದ ಬಿಂದು ಮೆಹ್ರಾ ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ಇವರಿಗೆ ಆದಾಯ ತೆರಿಗೆ ಇಲಾಖೆ ಈಗ ನೋಟಿಸ್ ಕಳುಹಿಸಿ ಶಾಖ್ ನೀಡಿದೆ.

m