ಕಣ್ಣೂರು: ತಲಶ್ಶೇರಿಯಲ್ಲಿ ಕೊಳ ಸ್ವಚ್ಛಗೊಳಿಸುವ ಸಮಯದಲ್ಲಿ ಮೀನು ಕಚ್ಚಿದ್ದರಿಂದ ಅಪರೂಪದ ಬ್ಯಾಕ್ಟೀರಿಯಾ ಸೋಂಕಿಗೆ ಗುರಿಯಾದ ಯುವಕನ ಬಲಗೈ ಅಂಗೈಯನ್ನು ಕತ್ತರಿಸಬೇಕಾಯಿತು.
ಸುಳ್ಯದಲ್ಲಿ “ಗಾಂಜಾ” “MDMA” ವೈರಲ್ ಬರಹ;!!!!
ರಾಜೀಶ್ ಎಂಬುವವರು ಒಂದು ತಿಂಗಳ ಹಿಂದೆ ಮೀನು ಕಚ್ಚಿದ ಗಾಯದಿಂದ ಸೋಂಕು ಹರಡಿ ಬಳಲುತಿದ್ದರು, ಈ ಸೋಂಕು ದೇಹದ ಜೀವಕೋಶಗಳನ್ನು ನಾಶಮಾಡುವ “ಗ್ಯಾಸ್ ಗ್ಯಾಂಗ್ರೀನ್” ಎಂಬ ಅಪಾಯಕಾರಿ ರೋಗವನ್ನು ಉಂಟುಮಾಡಿದ್ದರಿಂದ ಅಂತಿಮವಾಗಿ ಮುಂಗೈ ಅಂಗಚ್ಛೇದನೆಗೆ ಒಳಗಾಗಬೇಕಾಯಿತು.
ರಾಜೀಶ್ ಹೈನುಗಾರಿಕೆಯೊಂದಿಗೆ ವ್ಯವಸಾಯದಲ್ಲಿ ನಿರತರಾಗಿದ್ದಾರೆ. ತಮ್ಮ ಮನೆ ಸಮೀಪದ ತರಕಾರಿ ತೋಟದಲ್ಲಿರುವ ಸಣ್ಣ ಕೊಳವನ್ನು ಸ್ವಚ್ಛಗೊಳಿಸುತ್ತಿದ್ದಾಗ ಮೀನು ಅವರ ಬೆರಳಿನ ತುದಿಯನ್ನು ಕಚ್ಚಿತು. ಈ ಘಟನೆ ಫೆಬ್ರವರಿ ಮೊದಲ ವಾರದಲ್ಲಿ ನಡೆದಿದ್ದು, ಆರಂಭದಲ್ಲಿ ಗಾಯಕ್ಕೆ ಕೊಡಿಯೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳಲಾಯಿತು ಎನ್ನಲಾಗಿದೆ. ಆದರೆ ಗಾಯ ಗುಣವಾಗದೆ ಆರೋಗ್ಯ ಹದಗೆಟ್ಟು, ಮಾಹೆ ಆಸ್ಪತ್ರೆ ಮತ್ತು ನಂತರ ಕೋಝಿಕೋಡ್ನ ವಿಶೇಷ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ರಾಜೀಶ್ ಹೇಳುವಂತೆ, “ಕೋಝಿಕೋಡ್ಗೆ ತಲುಪಿದಾಗ ಸ್ಥಿತಿ ಗಂಭೀರವಾಗಿತ್ತು. ಬ್ಯಾಕ್ಟೀರಿಯಾದ ಸೋಂಕು ಬೆರಳಿನಿಂದ ಅಂಗೈವರೆಗೆ ವೇಗವಾಗಿ ಹರಡಿತ್ತು.”
ವೈದ್ಯರ ಪ್ರಕಾರ, “ಗ್ಯಾಸ್ ಗ್ಯಾಂಗ್ರೀನ್” ಸೋಂಕು ಅಪರೂಪದ್ದಾಗಿದ್ದು, ಸುಮಾರು ಒಂದು ಲಕ್ಷದಲ್ಲಿ ಒಬ್ಬರಿಗೆ ಮಾತ್ರ ತಾಗುತ್ತದೆ. ಈ ಬ್ಯಾಕ್ಟೀರಿಯಾ ಗಾಯದ ಮೂಲಕ ದೇಹಕ್ಕೆ ಪ್ರವೇಶಿಸಿ, ಜೀವಕೋಶಗಳನ್ನು ಕರಗಿಸುವುದರಿಂದ ಅಂಗಚ್ಛೇದನೆ ಅನಿವಾರ್ಯ, ಇಲ್ಲದಿದ್ದರೆ ಸೋಂಕು ಮೆದುಳಿಗೆ ಹರಡುವ ಅಪಾಯವಿತ್ತು. ಆರೋಗ್ಯ ಇಲಾಖೆಯು ಇದು ಸಾಂಕ್ರಾಮಿಕ ರೋಗವಲ್ಲ ಎಂದು ಕೂಡ ಸ್ಪಷ್ಟಪಡಿಸಿದೆ.
ಆದರೆ, ವೈಧ್ಯರ ಪ್ರಕಾರ ಕೆಸರುನೀರು ಮತ್ತು ಕೊಳಗಳ ಸಂಪರ್ಕದಲ್ಲಿ ಎಚ್ಚರಿಕೆ ವಹಿಸಬೇಕೆಂದು ಹೇಳಿದೆ. ರಾಜೀಶ್ ಅಂಗಚ್ಛೇದನೆಯ ನಂತರ ಆರ್ಥಿಕ ಮತ್ತು ದೈನಂದಿನ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಎಚ್ಚರಿಕೆ ಸಂದೇಶ : ಗ್ಯಾಸ್ ಗ್ಯಾಂಗ್ರೀನ್ನಂತಹ ಸೋಂಕುಗಳು ಕೆಸರು, ಕೊಳೆನೀರು,ಮೂಲಕ ಹರಡಬಹುದು. ಗಾಯಗಳಿಗೆ ತಕ್ಷಣದ ಚಿಕಿತ್ಸೆ ಮತ್ತು ಸ್ವಚ್ಛತೆ ಅತ್ಯಗತ್ಯ.





m
