57 ವರ್ಷದ ಪ್ರಕಾಶ್ ಎಂಬಾತ ಅಂದರ್;
ಮೂಡುಬಿದಿರೆ: ಇಲ್ಲಿನ ಪ್ರಾಂತ್ಯ ಗ್ರಾಮದ ಲಾಡಿ ಸಮೀಪದ ಅಜಂಕಲ್ಲು ನಿವಾಸಿ ಪ್ರಕಾಶ್ (57) ಎಂಬಾತನನ್ನು ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪೋಕ್ಸೋ ಕಾಯ್ದೆ 2012 ಅಡಿಯಲ್ಲಿ ಕೇಸು ದಾಖಲಾಗಿದ್ದು, ಆರೋಪಿಯು ಕಳೆದ ಒಂದು ವರ್ಷದಿಂದ ತನ್ನ ಮನೆಯ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಕುಟುಂಬದ ಸದಸ್ಯರು ಇಲ್ಲದ ಸಮಯದಲ್ಲಿ ಅಲ್ಲಿಗೆ ತೆರಳಿ ದೌರ್ಜನ್ಯ ನಡೆಸಿದ್ದಾನೆಂದು ಸಂತ್ರಸ್ತ ಅಪ್ರಾಪ್ತ ಬಾಲಕಿ ಕುಟುಂಬವು ದೂರು ನೀಡಿದೆ.
ಸಂತ್ರಸ್ತೆಯ ಪೋಷಕರ ದೂರಿನ ಪ್ರಕಾರ, ಪ್ರಕಾಶ್ ತನ್ನ ಮನೆಯ ಸಮೀಪದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬಾಲಕಿಯನ್ನು ಗುರಿಯಾಗಿರಿಸಿಕೊಂಡು, ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ್ದಾನೆ. ಇದು ಕಳೆದ ಒಂದು ವರ್ಷದಿಂದ ನಡೆದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಬಾಲಕಿಯು ತನ್ನ ಪರಿಸ್ಥಿತಿಯ ಬಗ್ಗೆ ಹೆತ್ತವರಿಗೆ ತಿಳಿಸಿದ ನಂತರ, ಕುಟುಂಬವು ಮೂಡುಬಿದಿರೆ ಪೊಲೀಸ್ ಸ್ಟೇಷನ್ಗೆ ಫಿರ್ಯಾದಿ ಸಲ್ಲಿಸಿತು.
ದೂರು ಪಡೆದ ನಂತರ ಪೊಲೀಸರು ತ್ವರಿತವಾಗಿ ಪ್ರಕಾಶ್‌ನನ್ನು ಬಂಧಿಸಿ, ಪೋಕ್ಸೋ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಾನೂನು ಕ್ರಮವನ್ನು ಪ್ರಾರಂಭಿಸಿದ್ದಾರೆ.





m
