ಗಾಝಾವನ್ನು ವಶಪಡಿಸಿಕೊಳ್ಳುವ ಯೋಜನೆಯನ್ನು ಇಸ್ರೇಲ್ ಭದ್ರತಾ ಸಚಿವ ಸಂಪುಟ ಅನುಮೋದಿಸಿರುವ ಹಿನ್ನೆಲೆಯಲ್ಲಿ, ಗಾಝಾ ಜನರ ಯೋಗಕ್ಷೇಮ ಮತ್ತು ಶಾಂತಿಗಾಗಿ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಖಾಝಿ ಎ.ಪಿ. ಉಸ್ತಾದ್ ಅವರು ವಿಶೇಷ ಕರೆ ನೀಡಿದ್ದಾರೆ.
ಅವರು ತಿಳಿಸಿರುವಂತೆ, ಆಗಸ್ಟ್ 11, 2025 ಸೋಮವಾರ ಮಗ್ರಿಬ್ ನಮಾಝಿನ ನಂತರ ಎಲ್ಲರೂ ತಮ್ಮ ಕುಟುಂಬ ಸದಸ್ಯರೊಂದಿಗೆ ಒಟ್ಟಿಗೆ ಕುಳಿತು ವಿಶೇಷ ಪ್ರಾರ್ಥನೆ ಸಲ್ಲಿಸಬೇಕು. ಪ್ರಾರ್ಥನೆಯ ಮೊದಲು ಒಳ್ಳೆಯ ಕಾರ್ಯಗಳನ್ನು ಮಾಡುವುದು ಅದರ ಸ್ವೀಕಾರ ಮತ್ತು ಶಿಷ್ಟಾಚಾರದ ಭಾಗವಾಗಿರುವುದರಿಂದ, ಅದೇ ದಿನ ಸೋಮವಾರದಂದು ಸುನ್ನತ್ ಉಪವಾಸ ವಹಿಸಿಕೊಳ್ಳಲು ಅವರು ಮನವಿ ಮಾಡಿದ್ದಾರೆ.
“ಪ್ಯಾಲೆಸ್ತೀನ್ ಜನತೆ ಸಾಧ್ಯವಾದಷ್ಟು ಬೇಗ ಶಾಂತಿಯಿಂದ ಬದುಕಲಿ” ಎಂದು ಖಾಝಿ ಸುಲ್ತಾನುಲ್ ಉಲಮಾ ಪ್ರಾರ್ಥಿಸಿದ್ದಾರೆ.






m
