Featured, ಅಂಕಣ, ಸ್ಥಳೀಯ

ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂಜಯನಗರದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಿ ಕೊಡುವಂತೆ ಮೆಸ್ಕಾಂಗೆ ನಾಗರೀಕರಿಂದ ಮನವಿ

ಬೆಳ್ತಂಗಡಿ (ಎ-15) : ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂಜಯನಗರ ವಾರ್ಡ್ ನಂ 5 ಹಾಗೂ 6 ರಲ್ಲಿ ಸುಮಾರು 2 ವರ್ಷಗಳಿಂದ ವಿದ್ಯುತ್ ಸಂಪರ್ಕವು ವಿದ್ಯುತ್ ಕಂಬಗಳಲ್ಲಿ ಚಾಲ್ತಿಯಲ್ಲಿದ್ದು ಆದರೆ 2 ವಾರ್ಡ್‌ನ ಹಲವಾರು ಮನೆ-ಮನೆಗಳಲ್ಲಿ ವಿದ್ಯುತ್ ಸಂಪರ್ಕ ವ್ಯರ್ಥವಾಗಿದನ್ನು ಮನಗಂಡು ಇಂದು ಅಕ್ಬರ್ ಹಾಗೂ ಮೆಹಬೂಬ್ ಬೆಳ್ತಂಗಡಿ ಒಳಗೊಂಡ ಸಂಜಯನಗರ ನಾಗರೀಕರ ನಿಯೋಗ ಬೆಳ್ತಂಗಡಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

    ಇದಕ್ಕೆ ಸ್ಪಂದಿಸಿದ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸಾಯಂಕಾಲ ಸಂಜಯನಗರಕ್ಕೆ ಭೇಟಿ ನೀಡಿ ನಾಗರಿಕರಲ್ಲಿ ಮಾತುಕತೆ ನಡೆಸಿ ಹೊಸ ವಿದ್ಯುತ್ ಟ್ರಾನ್ಸ್ಫರ್ಮರ್ ಅಳವಡಿಸುದಕ್ಕೆ ಸ್ಥಳ ನಿಗದಿ ಪಡಿಸಿ ಆದಷ್ಟು ಬೇಗ ಕೆಲಸ ಪೂರ್ತಿ ಮಾಡಿ ಕೊಡುವುದಾಗಿ ಭರವಸೆ ನೀಡಿದರು.

    ಮೆಸ್ಕಾಂ ಅಧಿಕಾರಿ ಭೇಟಿಯಾದ ನಿಯೋಗದಲ್ಲಿ ಸಂಜಯ ನಗರ ನಾಗರೀಕರಾದ ಸಯ್ಯೆದ್ ಗಫ್ಫಾರ್, ರಿಯಾಝ್ ಐ ಬಿ, ರಶೀದ್ ಸಂಜಯ ನಗರ, ಅಶ್ರಫ್ ಇಸುಬು ಸಂಜಯ ನಗರ,ಕರೀಂ ಸಂಜಯ ನಗರ ಉಪಸ್ಥಿತರಿದ್ದರು.

m

Related Posts