Featured, ಅಂಕಣ, ಸ್ಥಳೀಯ

ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಸ್ಟೇಟಸ್ ಹಾಕಿದವನ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು

ಬೆಳ್ತಂಗಡಿ (ಮೇ-28):ತಾಲೂಕಿನ ಕಾಜೂರು ನಿವಾಸಿ ರಾಘವ (ಬೊಲ್ಲಾಜೆ ಮನೆ, ಕೊಲ್ಲಿ ಮಿತ್ತಬಾಗಿಲು) ಎಂಬವರ ಮಗ ಸಂದೀಪ್ ಎಂಬಾತನು ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿ ದುರುದ್ದೇಶದಿಂದ ಮುಸ್ಲಿಂ ಸಮುದಾಯದ ಹಾಗೂ ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಧಾರ್ಮಿಕ ನಿಂಧನೆ ಮಾಡಿದ್ದು ಆತನ ವಾಟ್ಸಪ್ಪ್ ಸ್ಟೇಟಸ್ ನಲ್ಲಿ ಇತ್ತೀಚಿಗೆ ಕೊಳ್ತ ಮಜಲು ನಲ್ಲಿ ನಡೆದ ಹತ್ಯೆಯ ಭಾಗವಗಿ “ಬಂಟ್ವಾಳ ತಲ್ವಾ‌ರ್ ದಾಳಿ ಪ್ರಕರಣ, ಜಗಳ ತಡೆಯಲು ಹೋದ ಇಬ್ಬರು ಬುರ್ಖಾಧಾರಿಗಳಿಗೂ ಗಾಯ, ನಾಪತ್ತೆಯಾಗಿರುವ ಬುರ್ಖಾಧಾರಿಗಳಿಗಾಗಿ ಪರೋಟ ಅಂಗಡಿಯಲ್ಲಿ ಶೋಧ” ಎಂದು ಅವಹೇಳನವಾಗಿ ಸ್ಟೇಟಸ್ ಹಾಕಿರುವುದರ ವಿರುದ್ಧ ಬುಧವಾರ ಎಸ್‌ಡಿಪಿಐ ಕಾಜೂರು ನಾಯಕರ ನಿಯೋಗದಿಂದ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಯಿತು.

  ಕಾಜೂರಿನ ಪರಿಸರದಲ್ಲಿ ಹಿಂದೂ ಮುಸಲ್ಮಾನ ಭಾಂದವರು ಸುಮಾರು ವರ್ಷಗಳಿಂದ ಸೌರ್ಹಾದತೆಯಿಂದ ಬಾಳುತ್ತಿದ್ದು ಆತನ ಸ್ಟೇಟಸ್ ನಿಂದಾಗಿ ಹಿಂದೂ ಹಾಗೂ ಮುಸಲ್ಮಾನರ ನಡುವೆ ಅಪನಂಬಿಕೆಯನ್ನು ಹುಟ್ಟಿಸಿ ಸಾಮರಸ್ಯವನ್ನು ಕೆಡಿಸಿ ಆ ಮೂಲಕ ಹಿಂದೂ ಹಾಗೂ ಮುಸಲ್ಮಾನರ ನಡುವೆ ಕೋಮು ಪ್ರಚೋದನೆಯನ್ನು ಉಂಟು ಮಾಡಿ ಸಮಾಜದಲ್ಲಿ ಆಶಾಂತಿ ಉಂಟು ಮಾಡುವ ಪ್ರಯತ್ನ ಹಾಗೂ ಇಂತಹ ಕೃತ್ಯಯಿಂದ ಕೋಮು-ಗಲಭೆಗಳು ಆಗುವ ಸಾಧ್ಯತೆ ಇರುವುದರಿಂದ ತಾವುಗಳು ಆ ಕೋಮುವಾದಿ ಸಂದೀಪ್ ಎಂಬಾತನನ್ನು ಈ ಕೂಡಲೇ ಸೂಕ್ತ ತನಿಖೆ ನಡೆಸಿ ಕಠಿನ ಕಾನೂನು ಕ್ರಮಗಳ ಅಡಿಯಲ್ಲಿ ಬಂಧಿಸಿ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

  ಈ ಸಂದರ್ಭದಲ್ಲಿ ಎಸ್‌ಡಿಪಿಐ ಕಾಜೂರು ಬ್ರಾಂಚ್ ಉಪಾಧ್ಯಕ್ಷರು ಪಿ.ಎ ಕಬೀರ್, ಕಾರ್ಯದರ್ಶಿ ಎಂ. ಅಶ್ರಫ್, ಜೊತೆಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಗೂ ಶಂಸುದ್ದೀನ್ ಕಾಜೂರು ಉಪಸ್ಥಿತರಿದ್ದರು

m

Related Posts