Featured, ಅಂಕಣ, ಸ್ಥಳೀಯ

SSF ಬೆಳ್ತಂಗಡಿ ಡಿವಿಷನ್‌ ನಾಯಕತ್ವದ ಸೆಕ್ಟರ್ ಸಂಚಾರ ಕಾರ್ಯಕ್ರಮ ಮಡಂತ್ಯಾರ್‌ನಲ್ಲಿ ಉದ್ಘಾಟನೆ

ಸಕ್ರಿಯತೆಗೆ ಮನಸ್ಸುಗಳನ್ನು ಪೋಣಿಸುವ ಎಂಬ ಧ್ಯೇಯ ವಾಕ್ಯದೊಂದಿಗೆ SSF ಬೆಳ್ತಂಗಡಿ ಡಿವಿಷನ್ ಸಮಿತಿಯು ಹಮ್ಮಿಕೊಂಡಿದ್ದ ಸೆಕ್ಟರ್ ಸಂಚಾರ ಕಾರ್ಯಕ್ರಮದ ಉಧ್ಘಾಟನೆಯು SSF ಮಡಂತ್ಯಾರ್ ಸೆಕ್ಟರ್ ವ್ಯಾಪ್ತಿಯಲ್ಲಿ ದಿನಾಂಕ 06 ಜುಲೈ 2025 ರಂದು ಮಡಂತ್ಯಾರ್ ನೂರುಲ್ ಹುದಾ ಜುಮ್ಮಾ ಮಸ್ಜಿದ್ ಕಛೇರಿಯಲ್ಲಿ ನಡೆಯಿತು. ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಮಾಲಾಡಿಯವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆಕ್ಟರ್ ಸಮಿತಿ ಸದಸ್ಯರಾದ ಮಹಮ್ಮದ್ ರಾಝಿಕ್ ಮಾಲಾಡಿ ನೆರೆದವರನ್ನು ಸ್ವಾಗತಿಸಿದರು, ರಾಜ್ಯ WEFI ಕಾರ್ಯದರ್ಶಿಗಳಾದ ಅಬ್ದುಲ್ ರಶೀದ್ ಮಡಂತ್ಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು

ಡಿವಿಷನ್ ಉಪಾಧ್ಯಕ್ಷರಾದ ಲತೀಫ್ ಅಹ್ಸನಿ ಕಾರ್ಯಕ್ರಮದಲ್ಲಿ ದುಆ ಆಶೀರ್ವಚನಗೈದು ತರಗತಿ ಮಂಡಿಸಿದರು, ಸೆಕ್ಟರ್ ಅದ್ಯಕ್ಷರಾದ ಅಬ್ದುಲ್ ರಶೀದ್ ಮಾಲಾಡಿಯವರ ಅಧ್ಯಕ್ಷೀಯ ಭಾಷಣದ ನಂತರ ಜಿಲ್ಲಾ WEFI ಕಾರ್ಯದರ್ಶಿಗಳಾದ ನವಾಝ್ ಮಾವಿನಕಟ್ಟೆ ಸೆಕ್ಟರ್ ಹಾಗು ಯುನಿಟ್ ಅವಲೋಕನ ನಡೆಸಿದರು. ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ ಇಸಾಕ್ ಅಳದಂಗಡಿಯವರು ಹಾಗೂ ಡಿವಿಷನ್ ನಾಯಕರು KMJ ಮಡಂತ್ಯಾರ್ ಸೆಂಟರ್ ಅದೇ ರೀತಿ SYS ಮಡಂತ್ಯಾರ್ ಸರ್ಕಲ್ ನಾಯಕರು, ಸೆಕ್ಟರ್ ವ್ಯಾಪ್ತಿಯ SSF ಯೂನಿಟ್ ಕ್ಯಾಬಿನೆಟ್ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದ್ವಿತೀಯ PUC ಫಲಿತಾಂಶದಲ್ಲಿ ಉತ್ಕ್ರಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸೆಕ್ಟರ್ GD ಕಾರ್ಯದರ್ಶಿಗಳಾದ ಫಝಲ್ ಇರ್ವತ್ತೂರ್ ಪದವು ರವರಿಗೆ ಅವರ ಸಾಧನೆಯನ್ನು ಪರಿಗಣಿಸಿ ಸೆಕ್ಟರ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಅಲ್ಫಾಝ್ ಇರ್ವತ್ತೂರ್ ಪದವು ಧನ್ಯವಾದ ಮಾಡಿದರು.

m