Featured, ಅಂಕಣ, ಸ್ಥಳೀಯ

ಸುಳ್ಯ: ಧನಂಜಯ ಅಡ್ಡಂಗಾಯ ಕಾರಿಗೆ ಅಪಘಾತ,

ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ದ.ಕ. ಗೌಡ ವಿದ್ಯಾ ಸಂಘದ ಅಧ್ಯಕ್ಷರಾಗಿರುವ ಧನಂಜಯ ಅಪ್ಪಂಗಾಯ ಅವರು ಪ್ರಯಾಣಿಸುತ್ತಿದ್ದ ಕಾರು ಕೊಯ್ನಾಡು ಸಮೀಪ ಅಪಘಾತಕ್ಕೀಡಾಗಿದೆ. ಅವರ ಕಾರು ಮತ್ತು ಟಾಟಾ ಏಸ್ ಮಿನಿ ಗೂಡ್ಸ್‌ವಾಹನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗವು ಹಾನಿಯಾಗಿದೆ.

ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಧನಂಜಯ ಅಪ್ಪಂಗಾಯ ಅವರು ಬೆಂಗಳೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗೂಡ್ಸ್‌ವಾಹನವು ಸುಳ್ಯದಿಂದ ಕೊಡಗು ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ. ಅಪಘಾತದ ಹೊಡೆತಕ್ಕೆ ಮಿನಿ ಗೂಡ್ಸ್‌ವಾಹನ ಮಗುಚಿ ಬಿದ್ದಿದೆ.

ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಸಹಾಯ ಮಾಡಿದ್ದಾರೆ.

m

Related Posts