ಸುಳ್ಯ , ಅರಂತೋಡು ಎನ್ ಎಂ ಪಿ ಯು ಕಾಲೇಜು ಬಳಿ ಕೆ.ಎಸ್ ಆರ್ ಟಿ ಸಿ ಬಸ್ಸುಗಳ ಮಧ್ಯೆ ಅಪಘಾತವಾಗಿರುವ ಘಟನೆ ಇದೀಗ ನಡೆದಿದೆ.
ಅರಂತೋಡು ಎನ್ ಎಂ ಪಿ ಯು ಕಾಲೇಜ್ ಬಳಿ, ಸುಳ್ಯ ದಿಂದ ಮಡಿಕೇರಿ ಭಾಗಕ್ಕೆ ಮತ್ತು ಮೈಸೂರು ಭಾಗದಿಂದ ಸುಳ್ಯಕ್ಕೆ ಆಗಮಿಸುತ್ತಿದ್ದ ಸರಕಾರಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಯಾಗಿದೆ
ಕೆ.ಎಸ್ ಅರ್ ಟಿ.ಸಿ ಬಸ್ಸುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು ಬಸ್ಸು ಜಖಂಗೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಒಬ್ಬಾಕೆ ಮಹಿಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ ಮೃತ ಮಹಿಳೆಯನ್ನು ಕುಶಲನಗರ ಮೂಲದ ಭಾರತಿ ಎಂದು ಗುರುತಿಸಲಾಗಿದೆ. ಹಾಗೂ ಇಬ್ಬರ ಸ್ಥಿತಿ ಗಂಭೀರ ಎನ್ನಲಾಗಿದೆ.
15 ಗಾಯಾಳುಗಳು ಸುಳ್ಯ ಕೆ.ವಿ.ಜಿ ಆಸ್ಪತ್ರೆ ಹಾಗೂ 5 ಗಾಯಾಳುಗಳು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಹೆಚ್ಚುವರಿ ಮಾಹಿತಿ ನಿರೀಕ್ಷಿಸಲಾಗಿದೆ.







m
