ಬಂಟ್ವಾಳ : ಕೋಡಪದವು ಸೌಹಾರ್ದ ಫ್ರೆಂಡ್ಸ್ ವತಿಯಿಂದ ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಎ.ಕೆ ಕುಕ್ಕಿಲ ಅವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ಕೋಡಪದವು ಜಂಕ್ಷನ್ ನಲ್ಲಿ ನಡೆಯಿತು.
ಎ.ಕೆ. ಕುಕ್ಕಿಲ ಅವರ ಬಗ್ಗೆ ಅಭಿನಂದನಾ ಭಾಷಣ ಮಾಡಿದ ಬಿಎಸ್ಎನ್ಎಲ್ ನಿವೃತ್ತ ಉದ್ಯೋಗಿ ಡಿ.ಕೆ.ಇಬ್ರಾಹಿಂ ಮಾತನಾಡಿ, ಕಳೆದ ಎರಡು ದಶಕಗಳಿಂದ ಮಂಗಳೂರಿನ ಸುದ್ದಿ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಎ.ಕೆ.ಕುಕ್ಕಿಲ ಅವರು ಕೇವಲ ಪತ್ರಕರ್ತರಷ್ಟೇ ಅಲ್ಲದೆ, ಲೇಖಕ, ಚಿಂತಕ ಹಾಗೂ ಸಮಾಜಮುಖಿ ಚಟುವಟಿಕೆಗಳ ಪ್ರೇರಕರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ. ತಮ್ಮ ನಿಷ್ಪಕ್ಷಪಾತ ವರದಿಗಾರಿಕೆ, ಸಾಮಾಜಿಕ ನ್ಯಾಯದ ಪ್ರಚಾರ ಮತ್ತು ದಮನಿತರ ಧ್ವನಿಯನ್ನು ಬಲಪಡಿಸುವ ಮನೋಭಾವವನ್ನು ಬೆಳೆಸಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ಎ.ಕೆ.ಕುಕ್ಕಿಲ ಅವರು ಮಾತನಾಡಿ, ನಾನು ಪತ್ರಿಕಾರಂಗದಲ್ಲಿ ನನ್ನ ಹೆಸರು ಅಬ್ದುಲ್ ಖಾದರ್ ಎಂಬುದನ್ನು ಮರೆ ಮಾಚಿ ಎ.ಕೆ.ಕುಕ್ಕಿಲ ಎಂಬುದಾಗಿ ನನ್ನ ಊರಿನ ಹೆಸರಿಗೆ ಪ್ರಾಧಾನ್ಯತೆ ನೀಡಿದ್ದೇನೆ. ಕುಟುಂಬದ ಸದಸ್ಯರು ಹಾಗೂ ಊರಿನವರ ಸಹಕಾರದಿಂದ ನಾನು ಈ ಹಂತಕ್ಕೆ ತಲುಪಿದ್ದೇನೆ ಎಂದರು.
ಕೋಡಪದವು ರಹ್ಮಾನಿಯ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ರಹೀಮ್, ಕೋಡಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಉಮರ್ ಫಾರೂಕ್ ಟೆಕ್ನಿಕ್, ಎಸ್.ವೈ.ಎಸ್ ಮುಖಂಡರಾದ ಮಹಮ್ಮದ್ ಬೀಡಿ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯ ಹರ್ಷದ್ ಕುಕ್ಕಿಲ, ಮಾಜಿ ಸದಸ್ಯ ಸಿದ್ದೀಕ್ ಸರವು, ಕೋಡಪದವು ಬಿಗ್ ಬ್ಲಾಸ್ಟರ್ ಸಂಸ್ಥೆಯ ಮಾಜಿ ಅಧ್ಯಕ್ಷ ಕಬೀರ್ ತಾಳಿತ್ತನೂಜಿ, ಝಿಯಾದ್ ಕಂಪದಬೈಲು, ಯಾಸಿರ್ ಕುಕ್ಕಿಲ, ಫಾರೂಕ್ ಬೊನ್ಯಕುಕ್ಕು, ಹಂಝ ತಾಳಿತ್ತನೂಜಿ, ಇಮ್ರಾನ್ ಬೊನ್ಯಕುಕ್ಕು, ಹನೀಫ್ ಕಂಪದಬೈಲು ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಎಸ್.ವೈ.ಎಫ್ ಕುಕ್ಕಿಲ ಹಾಗೂ ಎಂ.ಕೆ. ಫ್ಯಾಮಿಲಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಸಿರಾಜ್ ಮದಕ ಸ್ವಾಗತಿಸಿ, ವಂದಿಸಿದರು.




m

