Featured, ಅಂಕಣ, ಸ್ಥಳೀಯ

ಕಾರ್ಯಕರ್ತರ ಮತ್ತು ನಾಯಕರ ತ್ಯಾಗ, ಸಮರ್ಪಣೆ ಹಾಗೂ ಪರಿಶ್ರಮವೇ ಪಕ್ಷದ ಯಶಸ್ವಿ ಪಯಣದ ಹಿಂದಿನ ಶಕ್ತಿ : ರಿಯಾಝ್ ಕಡಂಬು

ಬಿಸಿ ರೋಡ್, ಜು. 21: ಹಲವಾರು ಸವಾಲುಗಳನ್ನು ಎದುರಿಸಿ ಪಕ್ಷವು ಯಶಸ್ಸಿನ 18ನೇ ವರ್ಷಕ್ಕೆ ಕಾಲಿಟ್ಟಿದೆ. ಪಕ್ಷವನ್ನು ದಮನಿಸಲು ಪಟ್ಟಿರುವ ಶತ್ರುಗಳಿಗೆ ಸಾಮಾಜಿಕಹೋರಾಟ, ಸೇವೆಗಳ ಮೂಲಕ ಉತ್ತರ ಕೊಟ್ಟಿದೆ. ಕಾರ್ಯಕರ್ತರ ಮತ್ತು ನಾಯಕರ ತ್ಯಾಗ, ಸಮರ್ಪಣೆ ಹಾಗೂ ಪರಿಶ್ರಮವೇ ಪಕ್ಷದ ಯಶಸ್ವಿ ಪಯಣದ ಹಿಂದಿನ ಶಕ್ತಿ. ಎಲ್ಲರೂ ಒಂದಾಗಿ ಈ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಪಣತೊಡಬೇಕು ಎಂದು ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಕರೆ ನೀಡಿದರು. “SIR ಪ್ರಕ್ರಿಯೆಯು ಮತದಾರರನ್ನು ಸಂಕಷ್ಟಕ್ಕೆ ಕೊಂಡೊಯ್ಯಲಿದ್ದು, ಈ ಕುರಿತ ಜನ ಸೇವೆಗೆ ಎಲ್ಲಾ ಕಾರ್ಯಕರ್ತರು ಲಭ್ಯವಿರುವಂತೆ ಆಗ್ರಹಿಸಿದರು. ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಇದರ 18ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯು ಬಿಸಿ ರೋಡಿನ ಕೈಕಂಬದಲ್ಲಿರುವ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಅವರು, ಎಲ್ಲಾ ಅಡೆ ತಡೆಗಳನ್ನು ಭೇದಿಸಿ ಬೆಳಕಿನ ನಿರೀಕ್ಷೆ ಮತ್ತು ಆತ್ಮವಿಶ್ವಸದೊಂದಿಗೆ ಘನತೆ ಮತ್ತು ಗೌರವದ ಹೆಜ್ಜೆಯೊಂದಿಗೆ ಪಕ್ಷವು ಮುಂದೆ ಸಾಗುತ್ತಿದೆ. ನಮ್ಮ ಹೆಜ್ಜೆಗಳು ಮುಂದೆ ಇಡುತ್ತೇವೆಯೇ ಹೊರತು ಹಿಂತಿರುಗಿ ನೋಡುವುದು ನಮ್ಮ ಡಿಎನ್ಎ ಅಲ್ಲ ಎಂಬ ಮೂಲ ಪಾಠವನ್ನು ಆಗಾಗ ನೆನಪಿಸುತ್ತಾ ತನ್ನ ಸುದೀರ್ಘ ಪಯಣವನ್ನು ಮುಂದುವರೆಸಿ ಕೊಂಡು ಹೋಗುತ್ತಿದೆ. ಸಾಮಾಜಿಕ ನ್ಯಾಯಕ್ಕಾಗಿ ಪಕ್ಷವು ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಜನಪರ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶಾಹಿದಾ ತಸ್ನೀಮ್, ರಾಜ್ಯ ಸಮಿತಿ ಸದಸ್ಯರಾದ ಸಿದ್ದೀಕ್ ಕಲ್ಲಡ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ ಹಾಗೂ ಶಾಕಿರ್ ಅಳಕೆಮಜಲು, ಜಿಲ್ಲಾ ಸಮಿತಿ ಸದಸ್ಯರಾದ ಝೀನತ್ ಬಂಟ್ವಾಳ, ಅಬೂಬಕ್ಕರ್ ಮದ್ದ, ಅಡ್ವಕೇಟ್ ಕಬೀರ್ ಕೆಮ್ಮಾರ, ಅಕ್ಬರ್ ಅಲಿ ಪೊನ್ನೋಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್, ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.ಮನ್ಸೂರ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿ, ಶಾಕಿರ್ ಅಳಕೆಮಜಲು ವಂದಿಸಿದರು.

m

Related Posts