Featured, ಸ್ಥಳೀಯ

ಪಂಜಿಗಾರು–ಮಣಿಮಜಲು ರಸ್ತೆ ದುರವಸ್ಥೆ: ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಸುಳ್ಯ: ತಾಲೂಕಿನ ಕಳಂಜ ಗ್ರಾಮದ ಪಂಜಿಗಾರು–ಮಣಿಮಜಲು ಸಂಪರ್ಕ ರಸ್ತೆಯ ದುರವಸ್ಥೆ ಕುರಿತು ಗ್ರಾಮಸ್ಥರು ಸುಳ್ಯ ತಹಶೀಲ್ದಾರರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲನೆ ನಡೆಸಿದರು.
ತೀರಾ ಹದಗೆಟ್ಟಿರುವ ರಸ್ತೆಯಿಂದ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ವಾಹನ ಸವಾರರು ಪ್ರತಿನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದು, ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಹಶೀಲ್ದಾರರಿಗೆ ದೂರು ಸಲ್ಲಿಸಿದ್ದರು. ದೂರಿಗೆ ಸ್ಪಂದಿಸಿದ ಸುಳ್ಯ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ, ಕಳಂಜ ಗ್ರಾಮ ಪಂಚಾಯತ್ ಪಿಡಿಒ ಗೀತಾ ಹಾಗೂ ವಿ.ಎ. ಮಿಥುನ್ ಅವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು.

ರಸ್ತೆಯ ಸಮಸ್ಯೆಯ ಗಂಭೀರತೆಯನ್ನು ಮನಗಂಡ ಅಧಿಕಾರಿಗಳು, ಶೀಘ್ರದಲ್ಲೇ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಅಧಿಕಾರಿಗಳ ಭೇಟಿ ಹಾಗೂ ದುರಸ್ತಿ ಕಾಮಗಾರಿಯ ಭರವಸೆಯಿಂದ ಗ್ರಾಮಸ್ಥರಲ್ಲಿ ಆಶಾಭಾವನೆ ಮೂಡಿದ್ದು, ನೀಡಿರುವ ಭರವಸೆಯನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಜಮಾಲ್ ಮಣಿಮಜಲು, ಮಹೇಶ್ ಭಟ್, ವಸಂತ, ಎಲ್ಯಣ್ಣ, ಫಾರೂಕ್, ಚರಣ್, ಮಹಾ ಚಂದ್ರ, ಶಿವಾಜಿ, ಮುನೀರ್, ಪ್ರಶಾಂತ, ಚಿರಂಜೀವಿ, ನಝೀರ್ ಗ್ಯಾಲಕ್ಸಿ, ಸಂಜೀವ, ತೌಸಿ, ವೇಣು, ನಾರಾಯಣ ಹಾಗೂ ಮೊನಪ್ಪ ಉಪಸ್ಥಿತರಿದ್ದರು
m