ಇತರೆ

ಪುತ್ತೂರು : ದಾರಂದಕುಕ್ಕು ಸೈಫುಲ್ ಹುದಾ ಮದರಸದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಪುತ್ತೂರು: ದಾರಂದಕುಕ್ಕುವಿನ ಸೈಫುಲ್ ಹುದಾ ಮದರಸದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿ. ಕೆ. ಉಮ್ಮರ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಹೀನುಲ್ ಇಸ್ಲಾಂ ಜಮಾಅತ್ ಕಮಿಟಿ ಅಧ್ಯಕ್ಷ ಎ. ಕೆ. ಬಶೀರ್ ಹಾಜಿ, ದಾರಂದಕುಕ್ಕು ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಡಿ. ಕೆ. ಅಶ್ರಫ್ ಹಾಜಿ, ಎಸ್‌ಕೆಎಸ್‌ಎಸ್‌ಎಫ್ ಪುತ್ತೂರು ಕ್ಲಸ್ಟರ್ ಉಪಾಧ್ಯಕ್ಷ ಡಿ. ಕೆ. ಬಶೀರ್ ಮುಸ್ಲಿಯಾರ್, ಮದರಸ ಉಸ್ತಾದ್ ಯಾಕೂಬ್ ದಾರಿಮಿ ಹಾಗೂ ನೂರುಲ್ ಹುದಾ ಸ್ವಲಾತ್ ಕಮಿಟಿ ಕಾರ್ಯದರ್ಶಿ ನಿಜಾಮ್ ಸೇರಿದಂತೆ ಅಶ್ರಫ್ ಕಾಸಿಂ, ಅಜೀಜ್ ಕಾಸಿಂ, ಇಸ್ಮಾಯಿಲ್ ಸೇಡಿಯಾಫ್, ಕೆ. ಎಚ್. ಹಮೀದ್, ಡಿ. ಕೆ. ಹಮೀದ್, ಡಿ. ಕೆ. ಸಮೀರ್ ಹಾಜಿ, ಡಿ. ಕೆ. ಮುಹಮ್ಮದ್ ಹಾಜಿ ಹಾಗೂ ಪಿ. ಎಸ್. ಕೆ. ರಫೀಕ್ ಉಪಸ್ಥಿತರಿದ್ದರು. ಮದರಸ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮುದಾಯದ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಡಿ. ಕೆ. ಖಲಂದರ್ ಶಾಫಿ, ಎ. ಕೆ. ಬಶೀರ್ ಹಾಜಿ, ಡಿ. ಕೆ. ಉಮರ್, ಡಿ. ಕೆ. ಇರ್ಷಾದ್ ಹಾಗೂ ಕೆ. ಶಾಫಿ ಅವರು ಸಿಹಿತಿಂಡಿ ವಿತರಿಸಿ ಶುಭಕೋರಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕಮಿಟಿಯ ಕಾರ್ಯದರ್ಶಿ ಆತ್ಮೀಯವಾಗಿ ಸ್ವಾಗತಿಸಿ, ಕೃತಜ್ಞತೆ

m