ಇತರೆ

ಪೆರಾಜೆ: ಕರ್ನಾಟಕ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಅವರಿಗೆ ಮಾತೃವಿಯೋಗ

ಸುಳ್ಯ ಪೆರಾಜೆ: ಕರ್ನಾಟಕ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯಾಧ್ಯಕ್ಷರಾದ ಉನೈಸ್ ಪೆರಾಜೆ ಅವರ ತಾಯಿ ನೆಬಿಸಾ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.
ಮೃತರು ಪತಿ ಅಬ್ದುಲ್ ರಹಿಮಾನ್, ಪುತ್ರರಾದ ಉನೈಸ್ ಪೆರಾಜೆ, ಜುನೈದ್, ಸುಹೈಬ್, ಪುತ್ರಿ ಬುವಿಷತ್, ಮೊಮ್ಮಕ್ಕಳು, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಜನಾಝ್ ನಮಾಝ್ ಇಂದು ಅಸರ್ ನಮಾಝಿನ ಬಳಿಕ ಪೆರಾಜೆ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.

m