ಇತರೆ

ಜಟ್ಟಿಪಳ್ಳ : ಜೈನಾಭಿ ಕೆರೆಮೂಲೆ ನಿಧನ

ಸುಳ್ಯ: ಜಟ್ಟಿಪಳ್ಳ ನಿವಾಸಿ ಅಬ್ಬಾಸ್ ಕೆರೆಮೂಲೆ ಅವರ ತಾಯಿ ಜೈನಾಭಿ ಕೆರೆಮೂಲೆ (77) ಅವರು ಅಲ್ಪಕಾಲದ ಅನಾರೋಗ್ಯದಿಂದ ಅ.3ರಂದು ಕಾಸರಗೋಡಿನಲ್ಲಿ ನಿಧನರಾದರು.
ಕಾಸರಗೋಡಿನಲ್ಲಿ ವಾಸವಾಗಿರುವ ತಮ್ಮ ಪುತ್ರಿಯ ಮನೆಯಲ್ಲಿ ಅವರು ಕೊನೆಯುಸಿರೆಳೆದರು. ಮೃತರ ಜನಾಝಾವನ್ನು ಕಾಸರಗೋಡಿನಿಂದ ಜಟ್ಟಿಪಳ್ಳದ ಸ್ವಗೃಹಕ್ಕೆ ತರಲಾಗುತ್ತಿದೆ. ಇಂದು ರಾತ್ರಿ ಗಾಂಧಿನಗರ ಜುಮಾ ಮಸೀದಿಯಲ್ಲಿ ಮೃತರ ಜನಾಝ ನಮಾಝ್ ನೆರವೇರಿಸಿದ ಬಳಿಕ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರು ಪುತ್ರ ಅಬ್ಬಾಸ್, ಪುತ್ರಿ ಬಿಫಾತಿಮ್ಮ, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ