ಇತರೆ

ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ, ಚಿಂತಕ, ಲೇಖಕ,ಖ್ಯಾತ ಅಂಕಣ ಬರಹಗಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ. ಮುಜಾಫರ್ ಅಸ್ಸಾದಿ ನಿಧನ: ಸಿ.ಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು : ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ, ಚಿಂತಕ, ಲೇಖಕ,ಖ್ಯಾತ ಅಂಕಣ ಬರಹಗಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ. ಮುಜಾಫರ್ ಅಸ್ಸಾದಿ ನಿಧನ ಹೊಂದಿದರು.

ಜ.04 ತಡರಾತ್ರಿ 12.45ರ ವೇಳೆಗೆ ನಿಧನರಾಗಿದ್ದಾರೆ. ಹೃದಯ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ, ಬಹು ಅಂಗಾಂಗ ವೈಫಲ್ಯದ ಕಾರಣ ಕೊನೆಯುಸಿರೆಳೆದಿದ್ದಾರೆ.

ಸುಳ್ಯ ಭೇಟಿ:- ಮುಜಾಫರ್ ಅಸಾದಿ ಇವರು ಮಾಡನ್ನೂರು ಮಸೀದಿಯಲ್ಲಿ ಕಾರ್ಯಕ್ರಮಕ್ಕೆ ಭೇಟಿ ಸಮಯದಲ್ಲಿ ಸುಳ್ಯಕ್ಕೆ ಆಗಮಿಸಿದ್ದರು. ಈ ಸಂಧರ್ಬದಲ್ಲಿ ಟಿ.ಎಂ ಶಹೀದ್ ಹಾಗೂಇ-ವಾರ್ತೆ ಮುಖ್ಯಸ್ಥ ರಶೀದ್ ಜಟ್ಟಿಪಳ್ಳ ಇವರೊಂದಿಗೆ ಸುಮಾರು 1 ಗಂಟೆಗಳ ಕಾಲ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಿದ್ದರು.

Prof. Muzaffar Assadi: ಪ್ರೊ.ಅಸ್ಸಾದಿಯವರ ಸಾವು ನನ್ನ ಪಾಲಿಗೆ ದೊಡ್ಡ ನಷ್ಟ; ಸಿಎಂ ಸಿದ್ದರಾಮಯ್ಯ ಸಂತಾಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮುಜಾಫರ್ ಅಸ್ಸಾದಿ ಅವರೊಂದಿಗಿನ ಒಡನಾಟದ ಬಗ್ಗೆ ಹಂಚಿಕೊಂಡಿದ್ದಾರೆ. “ನಮ್ಮೆಲ್ಲರಿಗೆ ಪ್ರೀತಿಪಾತ್ರರಾಗಿದ್ದ ಹಿರಿಯ ವಿದ್ವಾಂಸ ಪ್ರೊ.ಮುಝಾಫರ್ ಅಸ್ಸಾದಿ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ’ ಎಂದು ಹೇಳಿದ್ದಾರೆ.

m