Featured, ಸ್ಥಳೀಯ

ಕೇವಲ ಒಂದು ವಾಟ್ಸಪ್ ಗ್ರೂಪ್ ಮುಖಾಂತರ ಇಷ್ಟೆಲ್ಲ ಮಾಡಬಹುದು ಎಂದು ತೋರಿಸಿಕೊಟ್ಟ ಯೂತ್ ಐಕಾನ್ ಫೈಝು ಕಟ್ಟೆಕ್ಕಾರ್ಸ್

ಸುಳ್ಯದ ಯುವ ಉದ್ಯಮಿ ಫೈಝಲ್ ಕಟ್ಟೆಕಾರ್ಸ್ (ಫೈಝು) ಈ ಹೆಸರು ಎಲ್ಲರಿಗೂ ಚಿರ ಪರಿಚಯ ಇವರು ತಮ್ಮದೆ ಶೈಲಿಯಲ್ಲಿ ಜನರ ಪ್ರೀತಿ ವಿಶ್ವಾಸ ಗಿಟ್ಟಿಸಿಕೊಂಡ ಇವರು ಒಂದೇ ಮಾತಿನಲ್ಲಿ ಇವರನ್ನ ಮಾದರಿ ಯೂತ್ ಐಕಾನ್ ಎನ್ನಬಹುದು.

ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಸುಳ್ಯದ ಅಜಾತ ಶತ್ರು ಮರ್ಹೂಂ ಅಬ್ಬಾಸ್ ಹಾಜಿಯವರ ಸುಪುತ್ರ ಫೈಝಲ್ ಕಟ್ಟೆಕ್ಕಾರ್ಸ್ ಇವರು ಎಂಟುವರೆ ವರ್ಷಗಳ ಹಿಂದೆ ರಚಿಸಿದ ಕೆ ಎ 21 ಸುಳ್ಯ ಎಂಬಾ ವಾಟ್ಸಪ್ ಗ್ರೂಪ್ ನ ಬಗ್ಗೆ,
ಸಮಾಜಕ್ಕೆ, ಸಮುದಾಯಕ್ಕೆ ಯಾವ ರೀತಿಯಲ್ಲಿ ಒಳಿತನ್ನು ನವಯುಗದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ನೀಡಬಹುದು ಎಂಬುದಕ್ಕೆ ಈ ಗ್ರೂಪ್ ಒಂದು ದೊಡ್ಡ ಉದಾಹರಣೆಯಾಗಿ ಬೆಳೆದಿದೆ.

ತುರ್ತು ಸಂಧರ್ಭಗಳಲ್ಲಿ ಅನೇಕ ಬಾರಿ ರೋಗಿಗಳ ಆರೋಗ್ಯ ಖರ್ಚಿಗೆ, ಹೆಣ್ಣುಮಕ್ಕಳ ಮದುವೆ ಖರ್ಚಿಗೆ, ಬಡ ವ್ಯಕ್ತಿಯ ಮನೆಯ ನಿರ್ಮಾಣದ ಖರ್ಚಿಗೆ, ಸುಂದರ ಸುಳ್ಯದ ಹೆಮ್ಮೆಯ ಸಮುದಾಯ ಭವನ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಗೆ, ಈಗೇ ಅನೇಕ ಸಂಧರ್ಭದಲ್ಲಿ ಈ ಗ್ರೂಪ್ ಮೂಲಕ ಸಣ್ಣ ಮಟ್ಟದಲ್ಲಿ ಅನೇಕರಿಗೆ ಸಹಾಯ ಹಸ್ತವನ್ನು ನೀಡಿದೆ.

ಅನೇಕ ಕೈಗಳ ಒಂದೇ ಮನಸಿನ ಗ್ರೂಪ್ ಸದಸ್ಯರ ಸಂಪೂರ್ಣ ಬೆಂಬಲದೊಂದಿಗೆ ಈ ವಾಟ್ಸಪ್ ಗ್ರೂಪ್ ಸಮಾಜಕ್ಕೆ, ಸಮುದಾಯಕ್ಕೆ ನೀಡಿದ ಸಂದೇಶ ದೊಡ್ಡದಿದೆ.

ಈ ಒಂದು ವಾಟ್ಸಪ್ ಗ್ರೂಪ್ ಸುಳ್ಯ ತಾಲ್ಲೂಕಿನ ವಿವಿಧ ಬಾಗಗಳ ಸಮಾನ ಮನಸ್ಕ ಯುವ ಪಡೆಗಳನ್ನು ಸಂಘಟಿಸಿ ಒಗ್ಗೂಡಿಸಿಕೊಂಡು ಸಮಯೋಚಿತ ನಿರ್ಧಾರಗಳೊಂದಿಗೆ ಮುನ್ನಡೆಯುತ್ತಿದೆ‌. ಇದರಲ್ಲಿ ಸಮಾಜ ಮತ್ತು ಸಮುದಾಯ ಸೇವೆಗೆ ಸದಾ ಕೈ ಮುಂದೆ ಇರುವ ಯುವ ಪಡೆ ವ್ಯತ್ಯಸ್ಥ ಮತ್ತು ಅಗತ್ಯಗಳಿಗೆ ಸಮಯೋಚಿತ ಸ್ಪಂದಿಸುವ ಯುವ ಕೂಟ ಇದಾಗಿದೆ‌.

ಇದೀಗ ಹೊಸ ಆಶಯದೊಂದಿಗೆ ಸಮುದಾಯದ ವಿಧ್ಯಾರ್ಥಿಗಳ ಅತ್ಯಂತ ಅವಶ್ಯಕತೆ ಇರುವ ಮತ್ತು ಪೂರಕವಾಗಿರುವ ಕಾರ್ಯಾಗರವನ್ನ ಹಮ್ಮಿಕೊಂಡಿದೆ‌.

ಜನವರಿ 5 ರಂದು ಸಮುದಾಯದ ವಿದ್ಯಾರ್ಥಿಗಳಿಗಾಗಿ ENGAGE, EDUCATE, EMPOWER ಎಂಬಾ ಕಾರ್ಯಕ್ರಮವನ್ನು ಸುಳ್ಯದ ಅನ್ಸಾರಿಯ ಗಲ್ಫ್ ಆಡಿಟೋರಿಯಂ ನಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ 9ನೇ 10ನೇ, ಪ್ರಥಮ ಮತ್ತು ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳ ಜೊತೆಗೆ ಪೋಷಕರೂ ಭಾಗವಹಿಸಿ ಈ ತರಬೇತಿಯ ಸದುಪಯೋಗ ಪಡೆದು ಕೊಳ್ಳಬಹುದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾದ ಕರ್ತವ್ಯ ನಮ್ಮೆಲ್ಲರಲ್ಲಿದೆ.

ಫಾಕಾ🖊

Related Posts