Featured, ಸ್ಥಳೀಯ

ಜ.5ರಂದು (ನಾಳೆ) ಗೂನಡ್ಕದಲ್ಲಿ ಇಸ್ಲಾಮಿಕ್ ದಫ್ ಕಲೆಗಳ ಕಲರವ, ಸಾಟಿ ಇಲ್ಲದ ಸ್ಪರ್ಧೆಗೆ ಸಾಕ್ಷಿಯಾಗಲಿದೆ ಸಜ್ಜನ ಅಂಗಣ ಸುಳ್ಯ ತಾಲೂಕು ಮಟ್ಟದ ಮತ್ತು ರಾಜ್ಯ ಮಟ್ಟದ ಸಂಪಾಜೆ ದಫ್‌ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮ

ಜ.5ರಂದು (ನಾಳೆ) ಗೂನಡ್ಕದಲ್ಲಿ ಇಸ್ಲಾಮಿಕ್ ದಫ್ ಕಲೆಗಳ ಕಲರವ, ಸಾಟಿ ಇಲ್ಲದ ಸ್ಪರ್ಧೆಗೆ ಸಾಕ್ಷಿಯಾಗಲಿದೆ ಸಜ್ಜನ ಅಂಗಣ ಸುಳ್ಯ ತಾಲೂಕು ಮಟ್ಟದ ಮತ್ತು ರಾಜ್ಯ ಮಟ್ಟದ ದಫ್‌ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮ

ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್ ಪೇರಡ್ಕ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳು ಗೂನಡ್ಕ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಸಿ. ಕೆ. ಲೆಜೆಂಡ್ಸ್ ಕಲ್ಲುಗುಂಡಿ, ತಾಲೂಕು ಮುಸ್ಲೀಂ ಫೆಡರೇಷನ್ ಹಾಗು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಳ್ಯ ತಾಲೂಕು ಮಟ್ಟದ ಹಾಗೂ  ರಾಜ್ಯಮಟ್ಟದ  ದಫ್ ಸ್ಪರ್ಧೆ  ಜ.5 ರಂದು ಗೂನಡ್ಕದ ಸಜ್ಜನ ಸಭಾ ಭವನದ ವಠಾರದ ಮೈದಾನದಲ್ಲಿ ಜರುಗಲಿದೆ.

ಇಸ್ಲಾಮಿಕ್ ಸಾಂಪ್ರದಾಯಿಕ ದಫ್ ಕಲೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಪ್ರಯತ್ನಿಸುತ್ತಿದೆ. ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲ್ಲಿದ್ದು ಅತ್ಯಾಕರ್ಷಕ ವೇದಿಕೆ ಸಿದ್ದಗೊಳ್ಳುತ್ತಿದೆ. ರಾಜ್ಯ ಮಟ್ಟದ ಸ್ಪರ್ಧೆ ಪ್ರಥಮ ದ್ವಿತೀಯ, ತೃತೀಯ ಅದೇ ರೀತಿ ತಾಲ್ಲೂಕಿಗೆ ಪ್ರಪ್ರಥಮ ಬಾರಿಗೆ ತಾಲ್ಲೂಕು ಮಟ್ಟದ ಸ್ಪರ್ಧೆ ನಡೆಯಲಿದ್ದು ಈ ವಿಭಾಗದಲ್ಲಿ ಕೂಡ ಪ್ರಥಮ  ದ್ವಿತೀಯ ಬಹುಮಾನಗಳನ್ನು ನೀಡಲಿದ್ದಾರೆ.

ದಫ್ ಕಲೆ ಈಗ ಗ್ರಾಮೀಣ ಭಾಗದಲ್ಲಿ ಜನಪ್ರಿಯವಾಗುತ್ತಿದ್ದು ಹೆಚ್ಚು ಮಂದಿ ಯುವಕರು ದಫ್ ಕಲಿಯಲು ಆಸಕ್ತಿ ತೋರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ  ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಹಾಗೂ ತಾಲೂಕು ಮಟ್ಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪೇರಡ್ಕ ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್‌ ಇದರ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ‌ ಈ ಬಗ್ಗೆ ನಮ್ಮೊಂದಿಗೆ ಮಾತನಾಡಿ ‘ ದಫ್‌ ಕಲೆಯನ್ನು ಪ್ರೋತ್ಸಾಹಿಸಲು ಮತ್ತು ನಮ್ಮಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಫ್ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಈಗಾಗಲೇ 14 ತಂಡಗಳು ಹೆಸರು ನೋಂದಾಯಿಸಿಕೊಂಡಿದೆ. ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಸ್ಥಳೀಯ 6 ತಂಡಗಳು ಹೆಸರು ನೋಂದಾಯಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ಸಂಜೆ 4 ಗಂಟೆಗೆ ಗೂನಡ್ಕ ಪೇಟೆಯಲ್ಲಿ ಆಕರ್ಷಕ ದಫ್ ತಂಡಗಳ ಮೆರವಣಿಗೆ ನಡೆಯಲಿದೆ ಮೆರವಣಿಗೆಯಲ್ಲಿ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಇರಲಿದೆ ಎಂದು ತಿಳಿಸಿದ್ದಾರೆ. ಸಂಜೆ 6 ಗಂಟೆಯ ಬಳಿಕ ತಾಲೂಕು‌ ಮಟ್ಟದ ಸ್ಪರ್ಧೆ ಹಾಗೂ 8 ಗಂಟೆಯ ಬಳಿಕ ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸನ್ಮಾನ ಕಾರ್ಯಕ್ರಮ: ಟಿ.ಎಂ ಶಹೀದ್ ತೆಕ್ಕಿಲ್ ಹಾಗೂ ಡಾ| ಉಮ್ಮರ್ ಬೀಜದಕಟ್ಟೆ

ಇದರೊಂದಿಗೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಶ್ರೇಷ್ಠ ಸಾಧಕ ಹಾಗೂ ರಾಜ್ಯ ಅಂತರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಚಾಪು ಮೂಡಿಸಿ ತಾಲ್ಲೂಕಿಗೆ ಹಲವಾರು ಅನುದಾನಗಳನ್ನು ತರಿಸುವಲ್ಲಿ ಶ್ರಮವಹಿಸಿದ ಸಾಧಕ ಟಿ.ಎಂ ಶಹೀದ್ ತೆಕ್ಕಿಲ್ ಹಾಗೂ ವೃತ್ತಿ ಜೀವನದೊಂದಿಗೆ ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ರಾಜ್ಯವ್ಯಾಪಿ  ಕನ್ನಡ ಸಾಹಿತ್ಯ ನಾಡು ನುಡಿಗೆ ಹಲವು ಕೊಡುಗೆಗಳನ್ನು ನೀಡಿ ಕನ್ನಡ ಸಾಹಿತ್ಯ ಮತ್ತು ಕಲೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ  ಕಾರ್ಯಕ್ರಮಗಳು ಹಾಗೂ ಹಲವಾರು ಯುವಸಮೂಹಕ್ಕೆ ಉದ್ಯೋಗ ನೀಡಿ, ರಾಜ್ಯ ಮಟ್ಟದ ತರಬೇತುದಾರರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಸಾಧನೆಗಳೊಂದಿಗೆ  ಮುಂಚೋಣಿ ನಾಯಕತ್ವ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಉಮ್ಮರ್ ಬೀಜದಕಟ್ಟೆ ಇವರಿಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ.9999 ಮತ್ತು ಫಲಕ, ದ್ವಿತೀಯ 7777 ಮತ್ತು ಫಲಕ, ತೃತೀಯ ರೂ 5555 ಮತ್ತು ಫಲಕ ನೀಡುವುದಾಗಿ ಮಾಹಿತಿ ನೀಡಿದ್ದಾರೆ.

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ.25000 ಮತ್ತು ಫಲಕ, ದ್ವಿತೀಯ ಬಹುಮಾನ ರೂ.15000 ಮತ್ತು ಫಲಕ, ತೃತೀಯ ಬಹುಮಾನ ರೂ.10,000 ಮತ್ತು ಫಲಕ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಅದ್ದೂರಿ ಸಿದ್ದತೆ: ರಾಜ್ಯ ಹಾಗೂ ತಾಲ್ಲೂಕು ಮಟ್ಟದ ದಫ್ ಸ್ಪರ್ಧೆ ನಡೆಯಲಿರುವುದರಿಂದ, ಸಜ್ಜನ ಸಭಾಂಗಣ ಆವರಣದಲ್ಲಿ ಅದ್ದೂರಿ ಸಿದ್ದತೆಗಳು ನಡೆಯುತಿದ್ದು. ಸಂಘಟಕರು ಹಗಲಿರುಳು ಕಾರ್ಯಕ್ರಮ ಯಶಸ್ವಿಗೆ ನಿರಂತರ ಶ್ರಮ ನಿರತರಾಗಿದ್ದಾರೆ. ಹಾಗೂ ಆಕರ್ಷಣೀಯ ವೇದಿಕ ಸಜ್ಜುಗೊಂಡಿದೆ.

ಗ್ರೌಂಡ್ ರಿಪೋರ್ಟ್: ಖಾದರ್ ಎ.ಕೆ.ಜೆ

m