ಕೊಯನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಜನವರಿ 14 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗ್ರೌಂಡ್ ನಲ್ಲಿ ಜಾಬಿರ್ ಅಹಮದ್ T Z ರವರ ನೇತೃತ್ವದಲ್ಲಿ 6 ತಂಡಗಳ ನಡುವೆ ಪಂದ್ಯಾಟ ನಡೆಯಿತು, ಶ್ರೀ ಗಣೇಶ್ ಯುವ ಬಳಗ ಕೊಯನಾಡು ತಂಡವು ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ, PIONEER SAMPAJE ತಂಡವು ರನ್ನರ್ ಪಟ್ಟವನ್ನು ಅಲಂಕರಿಸಿದ್ದಾರೆ, ಪಂದ್ಯಾಟದಲ್ಲಿ MAN OF THE MATCH ಅವಾರ್ಡ್ ಸಂಕೇತ್, BEST ಬೌಲರ್ ಸೀನಾನ್ ಸಂಪಾಜೆ, BEST ಫಿಲ್ದರ್ ರಜತ್, BEST ಬ್ಯಾಟ್ಸ್ ಮ್ಯಾನ್ ಚೇತನ್ ತನ್ನದಾಗಿಸಿಕೊಂಡಿದ್ದಾರೆ, ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಲಾ SDMC ಅಧ್ಯಕ್ಷ ಪುರುಷೋತ್ತಮ ಕಾಡುಮನೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಎಸ್ ಪಿ, ಗ್ರಾಮ ಪಂಚಾಯತ್ ಸದಸ್ಯ ನವೀನ್ ಕುಮಾರ್, ಉಮ್ಮರ್ ಚೆಡಾವು, ಇನ್ನಿತರರು ಉಪಸ್ಥಿತರಿದ್ದರು, ಟೀಂ ಕಾರ್ಗಿಲ್ ಮತ್ತು ಯುನೈಟೆಡ್ ಕೊಯನಾಡು ಸಂಘದ ಸಂಪೂರ್ಣ ಸಹಕಾರದಿಂದ ಪಂದ್ಯಾಟ ಯಶಸ್ವಿಯಾಗಿ ನಡೆಯಿತು.





m
