ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ, ಹಿದಾಯ ಪೌಂಡೇಶನ್ ಮಂಗಳೂರು ಯೆನೆಪೋಯ ಮೆಡಿಕಲ್ ಕಾಲೇಜು & ಆಸ್ಪತ್ರೆ, ದೇರಳಕಟ್ಟೆ ಇವುಗಳ ಸಹಭಾಗಿತ್ವ
ಸುಳ್ಯ : ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ಇದರ ಆಶ್ರಯದಲ್ಲಿ ಹಿದಾಯ ಪೌಂಡೇಶನ್ ಮಂಗಳೂರು,ಯೆನೆಪೋಯ ಮೆಡಿಕಲ್ ಕಾಲೇಜು & ಆಸ್ಪತ್ರೆ, ದೇರಳಕಟ್ಟೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಜನವರಿ 19 ರಂದು ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬೃಹತ್ ಆರೋಗ್ಯ ಮೇಳ ಮತ್ತು ರಕ್ತ ದಾನಿಗಳ ನೋಂದಣಿ ಶಿಬಿರ ಕಾರ್ಯಕ್ರಮ ನಡೆಯಲಿದೆ ಈ ಬಗ್ಗೆ ಇಂದು ಸುಳ್ಯ ಗ್ರೀನ್ ವ್ಯೂ ಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು ಈ ಸಭೆಯಲ್ಲಿ ಹಿದಾಯ ಪೌಂಡೇಶನ್ ಮಂಗಳೂರು ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜು & ಆಸ್ಪತ್ರೆ, ದೇರಳಕಟ್ಟೆ ಇದರ ಪ್ರತಿನಿಧಿಗಳು ಭಾಗವಹಿಸಿ ಸ್ಥಳ ವೀಕ್ಷಣೆ ಕಾರ್ಯಕ್ರಮ ರೂಪುರೇಷೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದ್ದರು.

ಈ ಸಂದರ್ಭದಲ್ಲಿ ಮೀಫ್ ಉಪಾಧ್ಯಕ್ಷ ಕೆ ಎಮ್ ಮುಸ್ತಫಾ,ಹಿದಾಯ ಪೌಂಡೇಶನ್ ಮಂಗಳೂರು ಇದರ ಪ್ರತಿನಿಧಿ ಗಳಾದ ಇಬ್ರಾಹಿಂ ಪರ್ಲಿಯಾ, ಜುನೈದ್ ಬಂಟ್ವಾಳ,ಕಲೀಲ್ ಅಹಮ್ಮದ್ ಗ್ರೀನ್ ವ್ಯೂ ಶಾಲೆಯ ಮುಖ್ಯ ಶಿಕ್ಷಕರಾದ ಇಲ್ಯಾಸ್ ಕಾಶೀಪಟ್ಟಣ, ಯೆನೆಪೋಯ ಮೆಡಿಕಲ್ ಕಾಲೇಜು & ಆಸ್ಪತ್ರೆ ಇದರ ಪ್ರತಿನಿಧಿ ಗಳಾದ ಅಬ್ಬುಲ್ ರಝಾಕ್, ನವಾಝ್,ಶಮೀರ್,ಸೀರಾಜ್ ಮುಸ್ಲಿಂ ಯೂತ್ ಫೆಡರೇಶನ್ ಸದಸ್ಯ ರಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ, ಸಿದ್ದೀಕ್ ಕ್ಕೊಕ್ಕೊ, ರಶೀದ್ ಜಟ್ಟಿಪಳ್ಳ, ಉನೈಸ್ ಪೆರಾಜೆ, ಕಲಂದರ್ ಎಲಿಮಲೆ, ಇಕ್ಬಾಲ್ ಸುಣ್ಣಮೂಲೆ, ಮೊದಲಾದವರು ಉಪಸ್ಥಿತರಿದ್ದರು





m

