Featured, ಸ್ಥಳೀಯ

DAY- 3, ಮೊಗರ್ಪಣೆ ಮಖಾಂ ಉರೂಸ್

“ಶ್ರೀಮಂತಿಕೆ ಮತ್ತು ಹಣಕಾಸಿನ ಅಭಿವೃದ್ಧಿ ಮನುಷ್ಯನಿಗೆ ಎಂದಿಗೂ ನೆಮ್ಮದಿ , ಸ್ವಸ್ಥ ಜೀವನ, ಸಮಾಧಾನ ನೀಡಲು ಸಾದ್ಯವಿಲ್ಲ!”; ಅಬ್ದುಲ್ ರಶೀದ್ ಸಖಾಫಿ ಏಲಂಕುಲಂ

ಸುಳ್ಯ; ಮೊಗರ್ಪಣೆ ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸಿ ಬರುತ್ತಿರುವ ಉರೂಸ್ ಸಮಾರಂಭದ ಮೂರನೇ ದಿನವಾದ ಜ.14 ರಂದು ಧಾರ್ಮಿಕ ಮತ ಪ್ರವಚನ ಹಾಗೂ ದುವಾಃ ಕಾರ್ಯಕ್ರಮ ನಡೆಯಿತು.

ಸಮಾರಂಭ ಆದಿಯಲ್ಲಿ ಸೈಯದ್ ಝೈನುಲ್ ಆಬಿದೀನ್ ತಂಙಳ್ ಜಯನಗರ ದುವಾಃ ನೇತೃತ್ವವಹಿಸಿದರು.

ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿ ಮಾತಾನಾಡಿದ ಅಬ್ದುಲ್ ರಶೀದ್ ಸಖಾಫಿ ಏಲಂಕುಂ ಇವರು ಮಾತನಾಡಿ “ಜಗತ್ತಿನಲ್ಲಿ ಅತೀ ಹೆಚ್ಚು ಸಂಪನ್ನರಿರುವ ನ್ಯೂಯಾರ್ಕ್‌ ದೇಶದಲ್ಲಾಗಿದೆ ಅತೀ ಹೆಚ್ಚು ಆತ್ಮಹತ್ಯೆಗಳು ನಡೆದಿರುವುದಾಗಿ ವರದಿಯಾಗಿರುವುದು. ಇದರಿಂದಾಗಿ ತಿಳಿದುಕೊಳ್ಳಬೇಕು ಶ್ರೀಮಂತಿಕೆ ಮತ್ತು ಹಣಕಾಸಿನ ಅಭಿವೃದ್ಧಿ ಮನುಷ್ಯನಿಗೆ ಎಂದಿಗೂ ನೆಮ್ಮದಿ , ಸ್ವಸ್ಥ ಜೀವನ ಹಾಗೂ ಸಮಾಧಾನವನ್ನು ನೀಡಲು ಸಾದ್ಯವಿಲ್ಲ! ಎಂಬುದು ನಾವು ನೆನಪಿಟ್ಟುಕೊಳ್ಳಬೇಕಾದ ವಿಷಯವಾಗಿದೆ. ಜೀವನದಲ್ಲಿ ಶಾಂತಿ ಸಮಾಧಾನ ಹಾಗೂ ನೆಮ್ಮದಿ ಜೀವನಕ್ಕಾಗಿ ಸೃಷ್ಟಿಕರ್ತನಾದ ಅಲ್ಲಾಹನ ದಾರಿ ಮಾತ್ರವಾಗಿದೆ. ಅಲ್ಲಾಹನ ನೆನಪು ಮಾತ್ರ ಮೈಗೂಡಿಸಿಕೊಳ್ಳಬೇಕು, ಅದರ ಪ್ರಯತ್ನಗಳಿಗೆ ಮುನ್ನುಗಬೇಕು ಅಲ್ಲಾಹನ ಮೇಲಿನ ಝೀಕ್ರ್ ಗಳನ್ನು ಹೆಚ್ಚಿಸಿದಲ್ಲಿ ಜೀವನ ಪಾವನವಾಗುತ್ತದೆ ಹಾಗೂ ನೆಮ್ಮದಿ ಹಾಗೂ ಶಾಂತಿ ಜೀವನದಲದಲ್ಲಿ ಸಾದ್ಯ ಎಂದರು. ಪ್ರವಾದಿ ಪೈಗಂಬರ್ ರವರ ಕುಟುಂಬ ಪರಂಪರೆಯ ಸೈಯದರನ್ನು ಗೌರವಿಸಬೇಕು, ಸೈಯದರನ್ನು ಪರಿಗಣಿಸುವುದು, ಸೈಯದರುಗಳ ನಾಯಕತ್ವದಲ್ಲಿ ಸಾಗುವುದು ಸೈಯದರಿಂದ ದುವಾಃ ನೇತೃತ್ವಕ್ಕೆ ಅವಕಾಶ ಕಲ್ಪಿಸುವುದು ಶ್ರೇಷ್ಠ ಕಾರ್ಯವಾಗಿದೆ, ಮಾತ್ರವಲ್ಲ ಸೈಯದರನ್ನು ಅವಗಣಿಸಿದವರನ್ನು ಅಲ್ಲಾಹನು ಪರಿಗಣಿಸಲ್ಲ ಎಂದರು. ಧರ್ಮದ ನೆಲೆಗಟ್ಟಿನಲ್ಲಿ ಮುಂದೆ ಹೋಗಬೇಕಾದಾಗ ಅಲ್ಲಾಹನ ಪರೀಕ್ಷೆಗಳು ಎದುರಾಗಬಹುದು, ಅನೇಕ ನೋವುಗಳು ಕಷ್ಟಗಳು ಎದುರಾಗಬಹುದು, ಆದರೂ ಕೂಡ ತಾಳ್ಮೆಯಿಂದ ಧರ್ಮ ಆಚರಣೆ ಮತ್ತು ಅನುಷ್ಠಾನದಲ್ಲಿ ರಾಜಿ ಮಾಡಬಾರದು. ಸಣ್ಣ ಕುಶಿಗಳನ್ನು ತ್ಯಜಿಸಿ ಪಾರತ್ರಿಕ ಸಂತೋಷಕ್ಕಾಗಿ ಅವನ ಸ್ಮರಣೆಗಳನ್ನು ಮಾಡಬೇಕು” ಎಂದು ಕರೆ ನೀಡಿದರು‌.

ವೇದಿಕೆಯಲ್ಲಿ ಉರೂಸ್ ಕಮೀಟಿ ಕನ್ವೀನರ್ ಅಬ್ದುಲ್ ರಝಾಕ್ ಶೀತಲ್, ಮೊಗರ್ಪಣೆ ಜುಮಾ ಮಸ್ಜಿದ್ ಮುದರ್ರಿಸ್ ಹಾಫಿಝ್ ಶೌಕತ್ತಲಿ ಸಖಾಫಿ ಉಸ್ತಾದ್, ಮದರಸ ಸದರ್ ಉಸ್ತಾದರಾದ ಕರೀಮ್ ಸಖಾಫಿ, ಶಫೀಕ್ ಹಿಮಮಿ ಉಸ್ತಾದ್, ಯೂಸುಫ್ ನಿಝಾಮಿ ಉಸ್ತಾದ್, ನಾಸಿರ್ ಸಖಾಫಿ ಉಸ್ತಾದ್, ಸಿದ್ದೀಕ್ ಸಹದಿ ಉಸ್ತಾದ್, ಮುಅಝ್ಝಿನ್ ಮೂಸಾ ಉಸ್ತಾದ್, ಹಂಝ ಸಖಾಫಿ ಉಸ್ತಾದ್, ದಫ್ ಅಸೋಸಿಯೇಷನ್ ಅಧ್ಯಕ್ಷ ಜಲೀಲ್, ಜಮಾಅತ್ ಕಮೀಟಿ ಸದಸ್ಯ ಹಾಜಿ ಎಸ್ ಎ ಎಸ್ ಮಹಮ್ಮದ್ ಜಟ್ಟಿಪಳ್ಳ, ಅಬ್ದುಲ್ ಖಾದರ್ (ಅಂದು), ಮುಂತಾದವರು ಉಪಸ್ಥಿತರಿದ್ದರು ‌.

ಅಬ್ದುಲ್ ರಶೀದ್ ಝೈನಿ ಉಸ್ತಾದ್ ಸ್ವಾಗತಿಸಿ, ಕರೀಮ್ ಸಖಾಫಿ ಉಸ್ತಾದ್ ವಂಧಿಸಿದರು

ಸುಳ್ಯ ತಾಲ್ಲೂಕಿನ ಮೊದಲ ಇಸ್ಲಾಮಿಕ್‌ ಕೇಂದ್ರ ಮೊಗರ್ಪಣೆ ಮಸೀದಿ ಹಾಗೂ ಐತಿಹಾಸಿಕ ಪ್ರಸಿದ್ಧ ಮೊಗರ್ಪಣೆ ಮಖಾಂ ಉರೂಸ್ : ಇ-ವಾರ್ತೆ.ಇನ್ ವಿಶೇಷ ಸಂಚಿಕೆ ಬಿಡುಗಡೆ

ಮೊಗರ್ಪಣೆ ಮಖಾಂ ಉರೂಸ್ : ಅದ್ದೂರಿ ಚಾಲನೆ;

DAY-2 ಮೊಗರ್ಪಣೆ ಮಖಾಂ ಉರೂಸ್;

DAY- 3, ಮೊಗರ್ಪಣೆ ಮಖಾಂ ಉರೂಸ್

ಇನ್ನಷ್ಟು ಸುದ್ದಿಗಳನ್ನು ಓದಿ👇

ಮೈ ಬಣ್ಣದ ತಾರತಮ್ಯ ಹಾಗೂ ಇಂಗ್ಲೀಷ್ ಮಾತನಾಡಲು ಬರಲ್ಲ ಎಂಬ ಕಾರಣಕ್ಕೆ ಕಿರುಕುಳ – ವಿಚ್ಚೇದನಕ್ಕೆ ಒತ್ತಾಯ!; ನೇಣಿಗೆ ಕೊರಳೊಡ್ಡಿದ ಶಹನಾ ಮಮ್ತಾಜ್!

ದೇವರಕೊಲ್ಲಿ; ಗಾರೆ ಮೋರಿ ಬಳಿ ತರಕಾರಿ ಸರಬರಾಜು ವಾಹನ ಅಪಘಾತ;

ಬಂಟ್ವಾಳ : ಎರಡು ಬೈಕ್ ಗಳ ನಡುವೆ ನಡೆದ ಭೀಕರ ಅಪಘಾತ : ಸಹ ಪ್ರಯಾಣಿಕೆಯಾಗಿದ್ದ ಬಾಲಕಿ ಮೃತ್ಯು

ತಡರಾತ್ರಿ ಮನೆಯೊಂದರ ಕಾಂಪೌಂಡ್ ಡಿಕ್ಕಿ ಹೊಡೆದ ಕಾರು ; ಆವರಣ ಗೋಡೆ ಹಾಗೂ ಮನೆಯಂಗಳದಲ್ಲಿದ್ದ ಕಾರು ಜಖಂ;

ಜನವರಿ 19 ರಂದು ಸುಳ್ಯದಲ್ಲಿ ಬೃಹತ್ ಆರೋಗ್ಯ ಮೇಳ : ಸಿದ್ದತೆ, ಪೂರ್ವಭಾವಿ ಸಭೆ

ಪಾಣೆಮಂಗಳೂರು ಪೇಟೆ, ಆಲಡ್ಕ ಮೆಲ್ಕಾರ್ ಸೇರಿದಂತೆ ವಿವಿದೆಡೆ ಹದಗೆಟ್ಟ ರಸ್ತೆ ಹಾಗೂ ಚರಂಡಿ ಅವ್ಯವಸ್ಥೆ; ಸರಿಪಡಿಸುವಂತೆ ಸಾರ್ವಜನಿಕ ಆಗ್ರಹ

 

m

Related Posts