ಹೈಲೈಟ್ಸ್
🔶ಮೊಗರ್ಪಣೆ ಮಖಾಂ ಉರೂಸ್ : ಅದ್ದೂರಿ ಚಾಲನೆ;
🔷”ಯುವ ಜನತೆ ಅಲ್ಲಾಹನ ಇಷ್ಟದಾಸರ ಇತಿಹಾಸ ಮತ್ತು ಜೀವನವನ್ನು ತಿಳಿದುಕೊಳ್ಳಬೇಕು”; ಖ್ಯಾತ ವಾಗ್ಮಿ ಸಿರಾಜುದ್ದೀನ್ ಖಾಸಿಮಿ
🔶”ಇಸ್ಲಾಮಿನ ಆದರ್ಶ ಮತ್ತು ಮೌಲ್ಯಗಳು ಸರ್ವಕಾಲಿಕ ಅದಕ್ಕೆ ಯಾವುದೇ ಅಪ್ಡೇಶನ್ ಅಗತ್ಯವಿಲ್ಲ”; ಖತೀಬ್ ಹಾಫಿಝ್ ಶೌಕತ್ತಲಿ
🔷ನಅತ್ ಆಲಾಪನೆ, ಮದ್ಹ್ ಗೀತೆಗಳು ಹಾಗೂ ದಫ್ ಪ್ರದರ್ಶನದೊಂದಿಗೆ ಉರೂಸ್ ಸಮಾರಂಭದ ಅದ್ದೂರಿ ಆರಂಭ
🔶ಮೊಗರ್ಪಣೆ ಉರೂಸ್ ಸಮಾರಂಭ ಮೊದಲ ದಿನದ ಸಂಪೂರ್ಣ ಅಪ್ಡೇಟ್ ಇಲ್ಲಿ👇
ಸುಳ್ಯ: ಎರಡು ವರ್ಷಗಳಿಗೊಮ್ಮೆ ನಡೆಯುವ ಮೊಗರ್ಪಣೆ ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ಉರೂಸ್ ಸಮಾರಂಭ ಅದ್ದೂರಿಯಾಗಿ ಆರಂಭಗೊಂಡಿತು.
ಆಕರ್ಷಣೀಯ ಲೈಟಿಂಗ್ ವ್ಯವಸ್ಥೆ ಹಾಗೂ ಸುವ್ಯವಸ್ಥಿತವಾಗಿ ಸಜ್ಜುಗೊಳಿಸಿರುವ ವೇದಿಕೆ ಮಸೀದಿ ದರ್ಗಾ ಹಾಗೂ ಸುಂದರವಾಗಿ ಸಜ್ಜುಗೊಂಡ ಮಸೀದಿ ಆವರಣದಲ್ಲಿ ಆರಂಭ ದಿನದಂದು ಬುರ್ಧ ಮಜ್ಲಿಸ್ ನಾಅತ್ , ದಫ್ ಪ್ರದರ್ಶನ ಹಾಗೂ ದಾರ್ಮಿಕ ಮತ ಪ್ರವಚನ ಹಾಗೂ ದುವಾ ಮಜ್ಲಿಸ್ ನಡೆಯಿತು.
ನಾಲ್ಕು ದಿನಗಳ ಉರೂಸ್ ಸಮಾರಂಭದ ಮೊದಲ ದಿನವಾದ ಜ.13 ರಂದು ಕಾರ್ಯಕ್ರಮದ ದುವಾಃ ನೇತೃತ್ವವನ್ನು ಮೊಗರ್ಪಣೆ ಜುಮಾ ಮಸೀದಿ ಮುದರ್ರಿಸ್ ಹಾಫಿಝ್ ಶೌಕತ್ತಲಿ ಉಸ್ತಾದ್ ನೆರವೇರಿಸಿದರು. ಅಲ್ಲದೇ ಇದೇ ದಿನ ಬೆಳಿಗ್ಗೆ ಉರೂಸ್ ಸಮಾರಂಭಕ್ಕೆ ದ್ವಜ ಏರಿಸುವ ಮುಖಾಂತರ ಚಾಲನೆ ನೀಡಲಾಗಿತ್ತು.
ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಅನಿರೀಕ್ಷಿತ ಬೇಟಿ; ಪುತ್ತೂರಿನಲ್ಲಿ ನಡೆಯಲಿರುವ ಸಮಾರಂಭಕ್ಕೆ ತೆರಳುತಿದ್ದವೇಳೆ ಅನಿರೀಕ್ಷಿತ ಬೇಟಿ ನೀಡಿದ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಬೇಟಿ ನೀಡಿ, ಮಾತನಾಡಿ “ಅಲ್ಲಾಹನ ಇಷ್ಟದಾಸರುಗಳ ಇತಿಹಾಸ ಹಾಗೂ ಚರಿತ್ರೆಗಳನ್ನು ತಿಳಿದುಕೊಳ್ಳಬೇಕಿದೆ ಹಾಗೂ ಅವರನ್ನ ಗೌರವಿಸಲು ನಮಗೆ ತೌಫೀಕ್ ನೀಡಲಿ ಎಂದು ಪ್ರಾರ್ಥನೆಯೊಂದಿಗೆ ಆರಂಬಿಸಿದರು. ಮನುಷ್ಯ ತನ್ನ ವಿಧ್ಯಾಬ್ಯಾಸ ಹೆಚ್ಚುತ್ತಿದ್ದಂತೆ ಅಗತ್ಯ ಕಲಿಕೆಯನ್ನು ಮರೆತು ಅನಗತ್ಯ ಕಲಿಕೆಯ ಬಗ್ಗೆ ಚಿಂತಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಾಧಾರಣವಾಗಿ ಅರಿವು ಹೆಚ್ಚಾದಂತೆ ಅರಿಯಬೇಕಾದ ವಿಷಯಗಳ ಬಗ್ಗೆ ಅರಿವು ಹೆಚ್ಚಾಗಬೇಕು ಆದರೆ ಇದರ ವಿರುದ್ದವಾಗಿ ನಡೆಯುತಿದೆ ಎಂದರು, ಯುವ ಜನತೆ ಅಲ್ಲಾಹನ ಔಲಿಯಾಗಳ ಬಗ್ಗೆ ತಿಳಿಯಬೇಕು, ಅವರು ಯಾರು, ಅವರ ಸ್ಥಾನ ಮಾನಗಳೇನು ಎಂದು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.

ದಾರ್ಮಿಕ ಮತ ಪ್ರವಚನ ನೇತೃತ್ವ ವಹಿಸಿ ಮಾತನಾಡಿದ ಹಾಫಿಝ್ ಶೌಖತ್ತಲಿ ಉಸ್ತಾದರು ಮಾತನಾಡಿ “ಇಸ್ಲಾಮಿನ ಆದರ್ಶ ಮತ್ತು ಮೌಲ್ಯಗಳು ಸರ್ವಕಾಲಿಕ ಮತ್ತು ಎಂದಿಗೂ ಸಮಕಾಲಿಕ ಇದರಲ್ಲಿ ಕಾಲಕಾಲಕ್ಕೆ ಯಾವುದೇ ಅಪ್ಢೇಶನ್ ಅಗತ್ಯವಿಲ್ಲ, ಅದರ ಅಗತ್ಯವೂ ಇಲ್ಲ! ಪ್ರವಾಧಿಯೊಂದಿಗೆ ಇಸ್ಲಾಮಿನ ಮೌಲ್ಯಗಳು ಮತ್ತು ಆದರ್ಶಗಳು ಪರಿಪೂರ್ಣಗೊಂಡಿದೆ. ಪೋಷಕರು ತಮ್ಮ ಮಕ್ಕಳಿಗೆ ಲೌಖಿಕ ಶಿಕ್ಷಣದ ಜೊತೆಗೆ ದಾರ್ಮಿಕ ಶಿಕ್ಷಣ ನೀಡುವುದು ಇಸ್ಲಾಮಿನ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋಗಲು ಸೂಕ್ತ ಶಿಕ್ಷಣವನ್ನು ಕೊಡಿಸಬೇಕಿದೆ. ಲೌಖಿಕ ಶಿಕ್ಷಣದ ಜೊತೆಗೆ ದಾರ್ಮಿಕ ಶಿಕ್ಷಣ ನೀಡಿದರೆ ಮಾತ್ರ ಇಸ್ಲಾಮಿಕ ಮೌಲ್ಯ ಅರಿತು ಪ್ರಬುದ್ಧ ಜೀವನ ಸಾದ್ಯ ಎಂದು ಕರೆ ನೀಡಿದರು. ಆಶಯ ಆದರ್ಶ ತತ್ವಗಳ ಜ್ಞಾನವೇ ಇಲ್ಲದವರು ಮಾತ್ರ ಇಸ್ಲಾಮ್ ಧರ್ಮದಲ್ಲಿ ಬದಲಾವಣೆ ಬೇಕು ಎನ್ನುತ್ತಾರೆ” ಎಂದು ಹೇಳಿದರು.
ಇ-ವಾರ್ತೆ ವಿಶೇಷ ಸಂಚಿಕೆ ಬಿಡುಗಡೆ; ಸುಳ್ಯ ತಾಲ್ಲೂಕಿನ ಮೊಟ್ಟಮೊದಲ ಇಸ್ಲಾಮಿಕ್ ಕೇಂದ್ರ ಮೊಗರ್ಪಣೆ ಜುಮಾ ಮಸೀದಿ ಇಲ್ಲಿನ ಇತಿಹಾಸದ ಕುರಿತು ಮೌಲ್ಯಯುತ ಬರಹಗಳನ್ನು ಹೊಂದಿರುವ ವಿಶೇಷ ಸಂಚಿಕೆಯನ್ನು ಉದ್ಘಾಟನಾ ಸಮಾರಂಭ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು ಸುಳ್ಯ ತಾಲ್ಲೂಕಿನ ಮೊದಲ ಇಸ್ಲಾಮಿಕ್ ಕೇಂದ್ರ ಮೊಗರ್ಪಣೆ ಮಸೀದಿ ಹಾಗೂ ಐತಿಹಾಸಿಕ ಪ್ರಸಿದ್ಧ ಮೊಗರ್ಪಣೆ ಮಖಾಂ ಉರೂಸ್ : ಇ-ವಾರ್ತೆ.ಇನ್ ವಿಶೇಷ ಸಂಚಿಕೆ ಬಿಡುಗಡೆ

ಪ್ರವಾದಿ ಮದ್ಹ್ ಗೀತೆಗಳು: ಮೊಗರ್ಪಣೆ ಮಸೀದಿ ದರ್ಸ್ ವಿಧ್ಯಾರ್ಥಿಗಳು ಹಾಗೂ ಮದರ ವಿಧ್ಯಾರ್ಥಿಗಳಿಂದ ಇಸ್ಲಾಮಿಕ್ ಹಾಗೂ ಪ್ರವಾದಿ ಮದ್ಹ್ ಕೀರ್ತನೆಗಳು ಹಾಡಿದರು.
ದ್ಸುಲ್-ಫುಕಾರ್ ದಫ್ ಅಸೋಸಿಯೇಷನ್ ವತಿಯಿಂದ ದಫ್ ಪ್ರದರ್ಶನ: ಸಭಾ ಕಾರ್ಯಕ್ರಮ ಆರಂಭಕ್ಕೂ ಮೊದಲು ಮಸೀದಿ ಆವರಣದಲ್ಲಿ ಧ್ಸುಲ್ ಫುಕಾರ್ ದಫ್ ಅಸೋಸಿಯೇಷನ್ ಸಂಘಟನೆಯ ಪುಟಾಣಿ ಮಕ್ಕಳಿಂದ ಆಕರ್ಷಣೀಯ ದಫ್ ಕಾರ್ಯಕ್ರಮ ನಡೆಯಿತು.

ನಾಅತ್ ಆಲಾಪನ;- ಖ್ಯಾತ ನಾಅತ್ ಆಲಾಪನೆಗಾರ ನಬೀಲ್ ಬರಖಾತಿ ಬೆಂಗಳೂರು ಇವರಿಂದ ನಾಅತ್ ಅಲಾಪನಾ ನಡೆಯಿತು. ಪ್ರವಾಧಿ ಕೀರ್ತನೆಗಳನ್ನು ಮದುರ ಕಂಠದಿಂದ ಸುದೀರ್ಘ ನಾಅತ್ ಆಲಾಪನೆ ನಡೆಯಿತು.

ವೇದಿಕೆಯಲ್ಲಿ ಮೊಗರ್ಪಣೆ ಜಮಾ ಅತ್ ಕಮೀಟಿ ಅಧ್ಯಕ್ಷ ಇಬ್ರಾಹಿಂ ಸೀಫುಡ್, ಉರೂಸ್ ಕಮೀಟಿ ಕನ್ವೀನರ್ ಅಬ್ದುಲ್ ರಝಾಕ್ ಹಾಜಿ ಶೀತಲ್, ಸಮದ್ ಹಾಜಿ ಜಿ. ಕೆ ರಜಾಕ್, ಜಮಾಅತ್ ಕಮೀಟಿ ಉಪಾಧ್ಯಕ್ಷ ಸಿ.ಉಸ್ಮಾನ್, ಸದಸ್ಯರು ಹಾಗೂ ಉಸ್ತುವಾರಿ ಹಾಜಿ ಉಮ್ಮರ್, ಖ್ಯಾತ ನಾಥ್ ಆಲಾಪನೆ ಗಾರ ನಬೀಲ್ ಬರಖಾತಿ ಬೆಂಗಳೂರು, ಮೊಗರ್ಪಣೆ ಮಸೀದಿ ಖತೀಬ್ ರಾದ ಹಾಫೀಝ್ ಶೌಕತ್ತಲಿ ಸಖಾಫಿ, ಎಸ್ ಸಂಶುದ್ದೀನ್, ಉದ್ಯಮಿ ಅಬ್ಬುಲ್ ರಹಿಮಾನ್ ಸಂಕೇಶ್ ಇಸ್ಮಾಯಿಲ್ ಸೊಣಂಗೇರಿ, ಹಾಗೂ ಜಮಾಅತ್ ಕಮೀಟಿ ಹಾಗೂ ಉರೂಸ್ ಕಮೀಟಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸಯ್ಯದ್ ಝನುಲ್ ಆಬಿದಿನ್ ತಂಙಳ್ ಜಯನಗರ, ಉರೂಸ್ ಸ್ವಾಗತ ಸಮಿತಿ ಕನ್‌ವೀನರ್ ಅಬ್ದುಲ್ ರಝಕ್ ಹಾಜಿ ಶೀತಲ್, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಬೆಂಗಳೂರು ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಹೆಚ್‌ಐಜೆ ಕಮಿಟಿ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಹೆಚ್‌ಐಜೆ ಕಮಿಟಿ ಉಪಾಧ್ಯಕ್ಷ ಸಿ. ಎಂ.ಉಸ್ಮಾನ್, ಬಿ ಜೆ ಎಂ ಪೈಚಾರ್ ಅಧ್ಯಕ್ಷ ಹಾಜಿ ಇಬ್ರಾಹಿಂ ಪಿ, ಹೆಚ್‌ಐಜೆ ಕಮಿಟಿ ಪ್ರಧಾನ ಕಾರ್ಯದರ್ಶಿ ಎಸ್.ಯು.ಇಬ್ರಾಹಿಂ,ನಿರ್ದೇಶಕರಾದ ಅಬ್ದುಲ್ ಸಮದ್ ಹಾಜಿ, ಉಮ್ಮರ್ ಹಾಜಿ ಎಚ್.ಎ, ಅಬ್ದುಲ್ ರಝಾಕ್ ಜಿ.ಕೆ, ಅಬ್ದುಲ್ ಖಾದರ್, ಮದ್ರಸ ಅಧ್ಯಾಪಕರುಗಳು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರ್ದ ಮುಅಲ್ಲಿಂ ಅಬ್ದುಲ್ ಕರೀಂ ಸಖಾಫಿ ಸ್ವಾಗತಿಸಿ, ಮುಅಲ್ಲೀಂ ಹಂಝ ಸಖಾಫಿ ವಂದಿಸಿದರು.
ಇ-ವಾರ್ತೆ ಪ್ರಕಾಶನಮಾಡಿದ ಮೊಗರ್ಪಣೆ ಮಖಾಂ ಉರೂಸ್ ವಿಶೇಷ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ 👇
ಇ-ವಾರ್ತೆ – Mogarpane Uroos Paper
ವರದಿ; ಖಾದರ್ ಜಟ್ಟಿಪಳ್ಳ




m

