ಇಂದು (ಜನವರಿ 15) ಮೊಗರ್ಪಣೆ ಉರೂಸ್ ಸಮಾರೋಪ ಸಮಾರಂಭ,ಸಯ್ಯದ್ ಶಿಹಾಬುದ್ದೀನ್ ತಂಙಳ್ ಅಲ್ ಬುಖಾರಿ ಕಡಲುಂಡಿ ಹಾಗೂ ಇಬ್ರಾಹಿಂ ಸಖಾಫಿ ತಾತೂರ್ ಕೇರಳ ಸಹಿತ ಹಲವು ಗಣ್ಯರ ಭಾಗಿ
ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ಅಸ್ಸಖಾಫ್ ಅಲ್ ಖಾದಿರಿ (ರ.ಅ) ರವರ ಹೆಸರಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುವ ಮೊಗರ್ಪಣೆ ಮುಖಾಂ ಉರೂಸ್ ಕಳೆದ ಮೂರು ದಿನಗಳಿಂದ ವಿಜ್ರಂಭಣೆಯಿಂದ ನಡೆದು ನಾಲ್ಕನೆಯ ದಿನವಾದ ಇಂದು ಸಮಾರೋಪ ಸಮಾರಂಭ ಕಾರ್ಯಕ್ರಮವು ನಡೆಯಲಿದೆ, ಕಡಲುಂಡಿ ತಂಙಳ್ ರವರ ಸುಪುತ್ರ ಸಯ್ಯದ್ ಶಿಹಾಬುದ್ದೀನ್ ತಂಙಳ್ ಅಲ್ ಬುಖಾರಿ ಕಡಲುಂಡಿ ರವರು ಭಕ್ತಿ ಪೂರಿತವಾದಂತಹ ದುಆ ಆಶೀರ್ವಚನವನ್ನು ನೀಡಲಿದ್ದಾರೆ, ಖ್ಯಾತ ವಾಗ್ಮಿ ಕೇರಳದಾದ್ಯಂತ ತನ್ನ ವಾಕ್ಚತುರ್ಯದಿಂದ ಕೂಡಿದ ಇಬ್ರಾಹಿಂ ಸಖಾಫಿ ತಾತೂರ್ ಕೇರಳ ಮುಖ್ಯ ಪ್ರಭಾಷಣಗೈಯಲಿದ್ದಾರೆ ಎಂದು ಉರೂಸ್ ಕಮೀಟಿ ಕನ್ವೀನರ್ ಅಬ್ದುಲ್ ರಝಾಕ್ ಹಾಜಿ ತಿಳಿಸಿರುತ್ತಾರೆ.





m
