ಸಮಾರೋಪ ಸಮಾರಂಭ ಪ್ರಾರ್ಥನಾ ಮಜ್ಲಿಸ್ ನಲ್ಲಿ ಸಾವಿರಾರು ಮಂದಿ ಭಾಗಿ
ಯೌವ್ವನವನ್ನು ಮಾದಕ ವಸ್ತುಗಳಿಗೆ ಸೀಮಿತಗೊಳಿಸಿ ನಾಶಪಡಿಸದಿರಿ ಯುವ ಸಮುದಾಯವೇ, ಇಸ್ಲಾಮ್ ಸೂಚಿಸಿದ ನಿಯಮಗಳಿಗೆ ಬದ್ಧರಾಗಿ ಜೀವನವನ್ನು ಮುಂದೆ ಸಾಗಿಸಿ:- ಇಬ್ರಾಹಿಂ ಸಖಾಫಿ ತಾತೂರ್ ಕೇರಳ

ಎರಡು ವರ್ಷಗಳಿಗೊಮ್ಮೆ ನಡೆಯಲಿರುವ ಇತಿಹಾಸ ಪ್ರಸಿದ್ದವಾದ ಮಾಂಬಿಳಿ ತಂಙಳ್ ಮುಖಾಂ ಉರೂಸ್ ಕಳೆದ ಜನವರಿ 12,13,14 ಮತ್ತು ನಿನ್ನೆ 15 ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದು ಅದ್ಧೂರಿಯಲ್ಲಿ ಪ್ರೌಢ ಸಮಾಪ್ತಿಗೊಂಡಿತು
ಸಮಾರೋಪ ಸಮಾರಂಭ ಪ್ರಾರ್ಥನಾ ಮಜ್ಲಿಸ್ ಗೆ ಕೇರಳ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಪಂಡಿತ ಸಯ್ಯದ್ ಶಿಹಾಬುದ್ದೀನ್ ತಂಙಳ್ ಅಲ್ ಬುಖಾರಿ ಕಡಲುಂಡಿ ಭಾಗವಹಿಸಿ ಹಿತವಚನ ನೀಡಿ ಭಕ್ತಿ ಪೂರಿತವಾದ ದುಆ ಆಶಿರ್ವಚನವನ್ನು ನೀಡಿದರು
ಮುಖ್ಯ ಪ್ರಭಾಷನಗಾರರಾಗಿ ಆಗಮಿಸಿದ ಖ್ಯಾತ ವಾಗ್ಮಿ ಕೇರಳದಾದ್ಯಂತ ತನ್ನ ವಾಕ್ಚತುರ್ಯದಿಂದ ಕೂಡಿದ ಇಬ್ರಾಹಿಂ ಸಖಾಫಿ ತಾತೂರ್ ಕೇರಳ ರವರು ಮಾತನಾಡಿ ದುಶ್ಚಟಗಳಿಂದ ದೂರವಿದ್ದು ಇಸ್ಲಾಂ ಕಲ್ಪಿಸಿದ ನೀತಿ ನಿಯಮಗಳಿಗೆ ಬದ್ಧರಾಗಿ ಅಲ್ಲಾಹನ ಮೇಲೆ ಭರವಸೆಯನ್ನು ಇಟ್ಟು ಜೀವನವನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಐದು ಹೊತ್ತಿನ ನಮಾಝ್ ಅನ್ನು ಬದುಕಿನದ್ದಕ್ಕೂ ಅಳವಡಿಸಿ ಜೀವಿಸಿದರೆ ಇಹಪರ ವಿಜಯ ಸಾಧ್ಯ ಎಂದು ಅವರು ಹೇಳಿದರು
ಕಾರ್ಯಕ್ರಮದಲ್ಲಿ ಹಾಫೀಝ್ ಶೌಖತ್ ಅಲಿ ಸಖಾಫಿ ಉದ್ಘಾಟಿಸಿ, ಧಾರ್ಮಿಕ ಮತ್ತು ಲೌಖಿಕ ಶಿಕ್ಷಣದೊಂದಿಗೆ ತಮ್ಮ ಮಕ್ಕಳನ್ನು ಆತ್ಮೀಯತೆ, ಭೌದ್ಧಿಕ ಶಿಕ್ಷಣವನ್ನು ತಿಳಿಸುವಲ್ಲಿ ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದು ಪ್ರಸ್ತಾವಿಕ ಮಾತುಗಳನ್ನಾಡಿದರು,
ಗಾಂಧಿನಗರ ಕೇಂದ್ರ ಜುಮಾ ಮಸೀದಿ ಖತೀಬ್ ಅಶ್ರಫ್ ಕಾಮಿಲ್ ಸಖಾಫಿ ಮಾತನಾಡಿ ಅಲಿಮ್ ಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪುಣ್ಯ ಸತ್ಕರ್ಮವಾಗಿದೆ ಎಂದು ಹೇಳಿದರು,
ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು HIJ ಕಮಿಟಿ ಅಧ್ಯಕ್ಷ ಇಬ್ರಾಹಿಂ ಸೀ ಫುಡ್ ವಹಿಸಿದರು
ವೇದಿಕೆಯಲ್ಲಿ ಉರೂಸ್ ಸ್ವಾಗತ ಸಮಿತಿ ಕನ್ವೀನರ್ ಅಬ್ದುಲ್ ರಝಾಕ್ ಶೀತಲ್, ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ಜಯನಗರ, ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಕೋಶಾಧಿಕಾರಿ ಮಹಮ್ಮದ್ ಆದರ್ಶ, ಗಾಂಧಿನಗರ ಮಸೀದಿ ಅಧ್ಯಕ್ಷ ಮಹಮ್ಮದ್ ಕೆ ಎಂ ಎಸ್, ಅನ್ಸಾರುಲ್ ಮುಸ್ಲಿಂಮೀನ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ಲಾ ಕಟ್ಟೆಕಾರ್, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಕಮಿಟಿ ಕಾರ್ಯದರ್ಶಿ ಎಸ್ ವೈ ಅಬ್ದುಲ್ ರಹಿಮಾನ್, ಜಯನಗರ ಮಸೀದಿ ಅಧ್ಯಕ್ಷ ಅಬ್ದುಲ್ಲಾ ಜಯನಗರ, ಎನ್ ಐ ಎಂ ಮದ್ರಸ ಅಧ್ಯಾಪಕರಾದ ಮೂಸಾ ಮುಸ್ಲಿಯಾರ್, ಅಬ್ದುಲ್ ರಶೀದ್ ಝೈನಿ, ಯೂಸುಫ್ ನಿಝಾಮಿ, ಹಂಸ ಸಖಾಫಿ,ಅಬೂಬಕ್ಕರ್ ಸಿದ್ದೀಕ್ ಸಅದಿ, ಶಫೀಕ್ ಹಿಮಮಿ ಮತ್ತಿತ್ತರರು ಉಪಸ್ಥಿತರಿದ್ದರು,
ಕಟ್ಟಡ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಸಮದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಸಖಾಫಿ ವಂದಿಸಿದರು
ಉರೂಸ್ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು ಕೊನೆಯಲ್ಲಿ ಸಿರಣಿ ವಿತರಣೆ ನಡೆಯಿತು.






m
