Featured, ಇತರೆ, ಸ್ಥಳೀಯ

ಪೇರಡ್ಕ-ಗೂನಡ್ಕ: ಅಲ್ ಬಿರ್ರ್ ಪ್ರಿ ಸ್ಕೂಲ್ ನೂತನ ಕಟ್ಟಡ ಉದ್ಘಾಟನೆ: ಆಧುನಿಕ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳ ಬೆಳೆಸುವ ಕಾರ್ಯ – ಜಿಫ್ರಿ ತಂಙಳ್

ಅಲ್ ಬಿರ್ರ್ ಶಿಕ್ಷಣ ಸಂಸ್ಥೆಗಳು ಹೊಸ ತಲೆಮಾರಿನ ಅಗತ್ಯಗಳಿಗೆ ತಕ್ಕಂತೆ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗೆ ಮಾತ್ರ ಸೀಮಿತವಾಗದೆ, ಆಧುನಿಕ ಜಗತ್ತಿನ ಸವಾಲುಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿರುವುದು ಶ್ಲಾಘನೀಯ : ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್

ಸಂಪಾಜೆ, ಜೂ. 9: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಪೇರಡ್ಕ-ಗೂನಡ್ಕದಲ್ಲಿರುವ ಎಂ.ಜೆ.ಎಂ ಅಲ್ ಬಿರ್ರ್ ಪ್ರಿ ಸ್ಕೂಲ್‌ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜೂನ್ 9ರಂದು ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ‘ಸಯ್ಯಿದ್ ಉಲಮಾ’ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಿ ಮಾತನಾಡಿ, ಅಲ್ ಬಿರ್ರ್ ಶಿಕ್ಷಣ ಸಂಸ್ಥೆಗಳು ಹೊಸ ತಲೆಮಾರಿನ ಅಗತ್ಯಗಳಿಗೆ ತಕ್ಕಂತೆ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗೆ ಮಾತ್ರ ಸೀಮಿತವಾಗದೆ, ಆಧುನಿಕ ಜಗತ್ತಿನ ಸವಾಲುಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿರುವುದು ಶ್ಲಾಘನೀಯ ಎಂದರು.
ಅಲ್ ಬಿರ್ರ್ ಶಿಕ್ಷಣ ಸಂಸ್ಥೆಯು ಗುಣಮಟ್ಟದ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳು, ಶಿಸ್ತು, ನಾಯಕತ್ವ ಗುಣಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವ ಆಧುನಿಕ ಶಿಕ್ಷಣ ವಿಧಾನಗಳು, ಆಟದ ಮೂಲಕ ಕಲಿಕೆ ಹಾಗೂ ಮಕ್ಕಳ ಸ್ನೇಹಿ ವಾತಾವರಣಕ್ಕೆ ಸಂಸ್ಥೆ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ವಹಿಸಿದ್ದರು. ದುವಾ ನೇತೃತ್ವವನ್ನು ಸಯ್ಯಿದ್ ಜಲಾಲುದ್ದೀನ್ ತಂಙಳ್ ಕುನ್ನಂಗೈ ವಹಿಸಿದರು.

ಈ ಸಂದರ್ಭದಲ್ಲಿ ಪ್ರಿನ್ಸಿಪಾಲ್ ಹಾಗೂ ಕೋ-ಆರ್ಡಿನೇಟರ್ ಅಹ್ಮದ್ ನಈಂ ಫೈಝಿ ಅಲ್ ಮಅಬರಿ, ಅಲ್ ಬಿರ್ರ್ ಅಧ್ಯಕ್ಷ ಪಿ.ಕೆ. ಉಮ್ಮರ್ ಗೂನಡ್ಕ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಸಿನಾನ್, ಕೋಶಾಧಿಕಾರಿ ಟಿ.ಬಿ. ಹನೀಫ್, ಉಪಾಧ್ಯಕ್ಷ ಹಾಗೂ ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಮುನೀರ್ ದಾರಿಮಿ, ಮಸೀದಿ ಜೊತೆ ಕಾರ್ಯದರ್ಶಿ ಕೆ.ಎಂ. ಉಸ್ಮಾನ್, ಲುಖ್ಮಾ ಉಲ್ ಹಕೀಂ ಮಅಬರಿ ಫೈಝಿ, ಬದ್ರ್ ಜುಮ್ಮಾ ಮಸೀದಿಯ ಖತೀಬ್, ಅಬ್ದುಲ್ ನಾಸಿರ್ ದಾರಿಮಿ (ಮುಹಿಯುದ್ದೀನ್ ಜುಮ್ಮಾ ಮಸೀದಿ, ಕಲ್ಲುಗುಂಡಿ), ಆಸಿಫ್ ಅಝ್ಹರಿ (ಜುಮ್ಮಾ ಮಸೀದಿ, ಅರಂತೋಡು), ಮುಹಿಯುದ್ದೀನ್ ಫೈಝಿ (ಜುಮ್ಮಾ ಮಸೀದಿ, ಅರಂಬೂರು), ಡಿಗ್ನಿಟಿ ಗೋಲ್ಡ್‌ನ ಮಾಲಕ ಬಾತಿಶ್ ಕನಕಮಜಲು, ಶಂಸುದ್ದೀನ್ ಫೈಝಿ ಬಿಳಿಯಾರು, ತಾಜ್ ಮುಹಮ್ಮದ್ ಸಂಪಾಜೆ, ಮದ್ರಸಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಸುಳ್ಯ ರೇಂಜ್ ಅಧ್ಯಕ್ಷ ಅಶ್ರಫ್ ಗುಂಡಿ, ಅರಂತೋಡು ಜಮಾಅತ್ ಅಧ್ಯಕ್ಷರು, ಎಸ್.ಕೆ.ಎಸ್.ಎಸ್.ಎಫ್ ದಕ್ಷಿಣ ಕನ್ನಡದ ಉಪಾಧ್ಯಕ್ಷ ಜಮಾಲ್ ಬೆಳ್ಳಾರೆ, ಪಿಡಬ್ಲ್ಯುಡಿ ಗುತ್ತಿಗೆದಾರ ಅಶ್ರಫ್ ಹಾಜಿ ಬಾಲೇಂಬಿ, ಯುಎಇ ಉದ್ಯಮಿ ಸೈಫುದ್ದೀನ್ ಪಟೇಲ್, ಎಸ್.ಎಂ.ಎಫ್ ಸುಳ್ಯದ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ, ಸಾಮಾಜಿಕ ಕಾರ್ಯಕರ್ತ ಸಾಜಿದ್ ಐ.ಜಿ., ಜುನೈದ್ ಟಿ.ಬಿ., ಸಾದುಮಾನ್ ತೆಕ್ಕಿಲ್, ಜುರೈದ್ ತೆಕ್ಕಿಲ್ ಸೇರಿದಂತೆ ಅನೇಕ ಗಣ್ಯರು, ಶಿಕ್ಷಣ ಪ್ರೇಮಿಗಳು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ನೂತನ ಕಟ್ಟಡ ಉದ್ಘಾಟನೆಯೊಂದಿಗೆ ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

m

 

Related Posts