ಅರಂತೋಡು: ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಅರಂತೋಡು ಇಲ್ಲಿನ ವಿದ್ಯಾರ್ಥಿನಿ ಫಾತಿಮತ್ ಶಿಬಾ ಮೇನಾಲ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600ರಲ್ಲಿ 541 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಸುಳ್ಯ ತಾಲೂಕಿನ ಅಜ್ಜಾವರ ಮೇನಾಲ ನಿವಾಸಿಗಳಾದ ಅಬೂಬಕ್ಕರ್ ಮೇನಾಲ ಹಾಗೂ ಫೌಸಿಯಾ ಬಿ.ಎಂ. ದಂಪತಿಗಳ ಪುತ್ರಿಯಾಗಿರುವ ಶಿಬಾ, ತನ್ನ ಶ್ರಮ ಹಾಗೂ ನಿರಂತರ ಪರಿಶ್ರಮದ ಮೂಲಕ ಈ ಸಾಧನೆಯನ್ನು ಸಾಧಿಸಿದ್ದಾಳೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಫಾತಿಮತ್ ಶಿಬಾ ಮೇನಾಲ ಅವರಿಗೆ ಕಾಲೇಜಿನ ಅಧ್ಯಾಪಕರು, ಸಹಪಾಠಿಗಳು ಹಾಗೂ ಕುಟುಂಬ ಸದಸ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ.





m
