Featured, ಇತರೆ, ಸ್ಥಳೀಯ

ಇರಾನ್‌ನಲ್ಲಿ ಸಿಲುಕಿದ್ದ 312 ಭಾರತೀಯ ಮೀನುಗಾರರು ಅರ್ಮೇನಿಯಾ ಮೂಲಕ ಭಾರತಕ್ಕೆ

ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಸಿಲುಕಿಕೊಂಡಿದ್ದ 312 ಭಾರತೀಯ ಮೀನುಗಾರರನ್ನು ಅರ್ಮೇನಿಯಾ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಶನಿವಾರ ತಿಳಿಸಿದ್ದಾರೆ.
ಇದಕ್ಕೂ ಮೊದಲು 312 ಭಾರತೀಯ ಮೀನುಗಾರರನ್ನು ಇರಾನ್‌ನಿಂದ ಸ್ಥಳಾಂತರಿಸಿದ ಒಂದು ವಾರದ ಬಳಿಕ, ಉಳಿದವರನ್ನೂ ಇದೀಗ ಯಶಸ್ವಿಯಾಗಿ ವಾಪಸು ಕರೆತರಲಾಗಿದೆ.
ಭಾರತೀಯ ಪ್ರಜೆಗಳ ಸುರಕ್ಷಿತ ಸ್ಥಳಾಂತರಕ್ಕೆ ಸಹಕರಿಸಿದಕ್ಕಾಗಿ, ಅರ್ಮೇನಿಯಾ ಸರ್ಕಾರಕ್ಕೆ ಹಾಗೂ ಅರ್ಮೇನಿಯಾದ ವಿದೇಶಾಂಗ ಸಚಿವ ಅರಾರತ್ ಮಿರ್ಜೊಯಾನ್ ಅವರಿಗೆ ಜೈಶಂಕರ್ ಧನ್ಯವಾದ ಅರ್ಪಿಸಿದ್ದಾರೆ.
“ಇನ್ನೂ 312 ಭಾರತೀಯ ಮೀನುಗಾರರನ್ನು ಇರಾನ್‌ನಿಂದ ಅರ್ಮೇನಿಯಾ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಅರ್ಮೇನಿಯಾ ಸರ್ಕಾರ ಮತ್ತು ನನ್ನ ಸ್ನೇಹಿತ ಅರಾರತ್ ಮಿರ್ಜೊಯಾನ್ ಅವರಿಗೆ ಧನ್ಯವಾದಗಳು,” ಎಂದು ಜೈಶಂಕರ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
m

Related Posts