Featured, ಇತರೆ, ಸ್ಥಳೀಯ

ಪೆರಾಜೆ : ಕಲ್ಬರ್ಪೆ ಬಳಿ ಪಾಳು ಭಾವಿಗೆ ಬಿದ್ದ ಆನೆ ಮರಿ: ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ಪೆರಾಜೆ: ಗ್ರಾಮದ ಕಲ್ಬರ್ಪೆ ಸಮೀಪದ ದಮಯಂತಿ ಎಂಬವರ ಜಾಗದಲ್ಲಿರುವ ಪಾಳು ಭಾವಿಗೆ ಕಳೆದ ರಾತ್ರಿ ಆನೆಮರಿಯೊಂದು ಬಿದ್ದ ಘಟನೆ ನಡೆದಿದೆ.
ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಭಾವಿಯಲ್ಲಿ ಸಿಲುಕಿಕೊಂಡಿರುವ ಆನೆ ಮರಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ಹಿಟಾಚಿ ಯಂತ್ರದ ಸಹಾಯದಿಂದ ದಾರಿ ನಿರ್ಮಿಸುವ ಕೆಲಸ ನಡೆಯುತ್ತಿದೆ.
ರಕ್ಷಣಾ ಕಾರ್ಯಾಚರಣೆ ವೇಳೆ ಸ್ಥಳೀಯರು ಕೂಡ ಸಹಕರಿಸುತ್ತಿದ್ದು, ಆನೆ ಮರಿಯನ್ನು ಯಾವುದೇ ಗಾಯವಾಗದಂತೆ ಹೊರತೆಗೆದುಕೊಳ್ಳಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಕಾರ್ಯಾಚರಣೆ ಮುಂದುವರಿದಿದ್ದು, ಶೀಘ್ರದಲ್ಲೇ ಆನೆ ಮರಿಯನ್ನು ಸುರಕ್ಷಿತವಾಗಿ ರಕ್ಷಿಸುವ ನಿರೀಕ್ಷೆಯಿದೆ.
m

Related Posts