ದೊಡ್ಡಬಳ್ಳಾಪುರ : SDPI ದೊಡ್ಡಬಳ್ಳಾಪುರ ಸಮಿತಿಯ ವತಿಯಿಂದ ನಗರದ ವಿವಿಧೆಡೆ, ನಗರದ ವಿವಿಧೆಡೆ, ಪಕ್ಷದ ಕಚೇರಿ ಹತ್ತಿರ, ಇಸ್ಲಾಂಪುರ ಟಿಪ್ಪು ಸರ್ಕಲ್ ಹಾಗೂ ಕತ್ತಾಲಿ ಮಕಾನ್ ಹತ್ತಿರ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ SDPI ತಾಲೂಕು ಅಧ್ಯಕ್ಷರಾದ ಫಯಾಜ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ತಾಲೂಕು ಪ್ರಧಾನ ಕಾರ್ಯದರ್ಶಿ ನೂರ್ ಅಹಮದ್ ಅವರು ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿ ಮಾತನಾಡುತ್ತಾ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ, ಅವರ ತ್ಯಾಗ ಮತ್ತು ದೇಶಪ್ರೇಮವನ್ನು ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಇಮ್ರಾನ್, ಇಲಿಯಾಸ್, ಖಾಜಾ, ರೂಫ್, ಹಶೀಮ್, ಸಲ್ಮಾನ್, ಯಾಸೀನ್, ಸಾದಿಕ್, ರೋಷನ್, ಅಫ್ರೋಜ್, ಇರ್ಫಾನ್, ತಾಜಮುಲ್, ಹಾಗೂ ವುಮೆನ್ ಇಂಡಿಯಾ ಮೂವ್ಮೆಂಟ್ ಅಧ್ಯಕ್ಷರು ಸಮಿತಿ ಸದಸ್ಯರು ,ಮಸೀದಿ ಮುಖಂಡರು, ಇಮಾಮ್ಗಳು ಮತ್ತು ಇತರರು ಉಪಸ್ಥಿತರಿದ್ದರು.
ಖಾಜಾ ಅವರು ಸ್ವಾಗತ ಕೋರగా, ರೂಫ್ ಅವರು ವಂದನಾರ್ಪಣೆ ನೆರವೇರಿಸಿದರು.
![]()