ಪುತ್ತೂರು:ಪುತ್ತೂರಿನ ದರ್ಬೆಯಲ್ಲಿ ಮಗುವಿನ ಜನನ ಪ್ರಮಾಣಪತ್ರವನ್ನು ಲ್ಯಾಮಿನೇಷನ್ ಮಾಡುವ ವೇಳೆ ದಾಖಲೆ ಸುಟ್ಟು ಹಾನಿಯಾಗಿದೆ ಎಂಬ ವಿಚಾರವಾಗಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತರಾದ ಸುಳ್ಯ ಸಮೀಪದ ಮಂಡೆಕೋಲು ನಿವಾಸಿಗಳಾದ ಮುಬಾರೀಶ್,ಮುಬಾಶಿರ್ ಮತ್ತು ಮಿಸ್ಬಾನ, ಮೇಲೆ ಪ್ರಕರಣದ ಆರೋಪಿ ಅಂಜನಾ ಪೈ ನೀಡಿದ ದೂರಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣಕ್ಕೆ ಇಂದು ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರ ಪರವಾಗಿ ನ್ಯಾಯವಾದಿ ರಶೀದ್ ಗೂನಡ್ಕ ನ್ಯಾಯಾಲಯ ದಲ್ಲಿ ವಾದ ಮಂಡಿಸಿದ್ದರು.





m
